Thursday, January 23, 2025
ಸುದ್ದಿ

ಸಂಘಟನೆಯ ಪ್ರಮುಖರಿಗೆ ಎಚ್ಚರದಿಂದಿರಲು ಉಡುಪಿ SP ಸಂದೇಶ– ಕಹಳೆ ನ್ಯೂಸ್

ಸಂಘಟನೆಯ ಪ್ರಮುಖರಿಗೆ ಎಚ್ಚರದಿಂದಿರಲು ಉಡುಪಿ SP ಸಂದೇಶ– ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ : ಪ್ರವೀಣ್‌ ನೆಟ್ಟಾರು ಹತ್ಯೆಯ ನಂತರ ನಿನ್ನೆ ಸಂಜೆ ಸುರತ್ಕಲ್‌ನಲ್ಲಿ ಫಾಜಿಲ್‌ ಎಂಬ ಯುವಕನ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರಿಗೆ ಎಚ್ಚರದಿಂದಿರಲು ಪೊಲೀಸ್‌ ಇಲಾಖೆಯಿಂದ ಸಂದೇಶ ರವಾನೆ ಮಾಡಲಾಗಿದೆ.

ಪ್ರವೀಣ್‌ ಹತ್ಯೆಯಿಂದ ಇಡೀ ಕರಾವಳಿ ಜನತೆ ಬೆಚ್ಚಿಬಿದ್ದಿದ್ದು, ಈಗ ಮತ್ತೊಂದು ಕೊಲೆ ನಡೆದಿರುವುದರಿಂದ ಪೊಲೀಸ್‌ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ.

ಮತ್ತು ಸಂಘ ಪರಿವಾರ ಸಹಿತವಾಗಿ ವಿವಿಧ ಸಂಘಟನೆಯ ಪ್ರಮುಖರು ಎಚ್ಚರದಿಂದರುವಂತೆ ಮತ್ತು ರಾತ್ರಿ ವೇಳೆಯಲ್ಲಿ ಒಬ್ಬೊಬ್ಬರಾಗಿ ಸುತ್ತಾಡದಂತೆ ಸಲಹೆ ನೀಡಲಾಗಿದೆ.

ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗ ಸೇರಿದಂತೆ ಸೂಕ್ಷ್ಮ ಪ್ರದೇಶ, ಚೆಕ್‌ ಪೋಸ್ಟ್‌ಗಳಲ್ಲಿ ಬೀಟ್‌ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

ಅನುಮಾನಾಸ್ಪದ ನಡೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಯಾವುದೆ ಮಾಹಿತಿ ಇದ್ದರೂ ಪೊಲೀಸ್‌ ಇಲಾಖೆಗೆ ನೀಡಬಹುದು ಎಂದು ಉಡುಪಿ ಎಸ್ಪಿ ಎನ್.‌ ವಿಷ್ಣುವರ್ಧನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.