Thursday, January 23, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಸುರತ್ಕಲ್ ಹತ್ಯೆ : ಕಾಂಗ್ರೇಸ್ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಕೋಮು ಭಾವನೆ ಕೆರಳಿಸುವ ಹೇಳಿಕೆ ವಿರುದ್ಧ ಬಿಜೆಪಿ ಶಾಸಕ ಡಾ.ಭಾರತ್ ಶೆಟ್ಟಿ ವೈ ಗರಂ ; ಹಿಂದೂಗಳೇ ದುಷ್ಕರ್ಮಿಗಳು ಎಂಬ ಭಾವನೆಯಲ್ಲಿ ಹೇಳಿಕೆ ನೀಡಿದ ಬಾವಗೆ ತಿರುಗೇಟು ನೀಡಿದ ಭರತ್ ಶೆಟ್ಟಿ – ಕಹಳೆ ನ್ಯೂಸ್

ಸುರತ್ಕಲ್ ನಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆಯ ನೆಪದಲ್ಲಿರಾತ್ರೋ ರಾತ್ರಿ ಮನೆಗೆ ನುಗ್ಗಿ ಅಮಾಯಕರಿಗೆ ಕಿರುಕುಳ ನೀಡುವುದನ್ನು ಸಹಿಸಲಾಗದು.ನೈಜ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಿ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಪೊಲೀಸ್ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗೃಹ ಸಚಿವರು ಈಗಾಗಲೇ ಸೂಕ್ತ ತನಿಖೆಯನ್ನು ಮಾಡಲು ಆದೇಶ ನೀಡಿದ್ದಾರೆ.
ವಿನಾಕಾರಣ ರಾತ್ರೋರಾತ್ರಿ ಮನೆಗಳಿಗೆ ನುಗ್ಗಿ
ವಿಚಾರಣೆ ನೆಪದಲ್ಲಿ ಕಿರುಕುಳ ನೀಡುವುದು ಸರಿಯಲ್ಲ.
.
ಸಿಸಿ ಟಿವಿ ಸಾಕ್ಷ್ಯಾಧಾರದಲ್ಲಿ ನೈಜ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಯೋನ್ಮುಖವಾಗಬೇಕು ಎಂದು ನಾನು ಒತ್ತಾಯಿಸುತ್ತೇನೆ.ಸಾರ್ವಜನಿಕರು ಕ್ಷೇತ್ರದಲ್ಲಿ ಶಾಂತಿ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಕಾಂಗ್ರೆಸ್ ಮಾಜಿ ಶಾಸಕ ಮೊಹಿಯುದ್ದೀನ್
ಬಾವ ಅವರು ಸುರತ್ಕಲ್ ನಲ್ಲಿ ನಡೆದ ಹತ್ಯೆಯ ಕುರಿತಂತೆ ಕೋಮು ಭಾವನೆ ಕೆರಳಿಸುವ ರೀತಿ ಹೇಳಿಕೆಯನ್ನು ನೀಡಿರುವುದನ್ನು
ಶಾಸಕ ಡಾ.ಭಾರತ್ ಶೆಟ್ಟಿ ವೈ ಅವರು ಖಂಡಿಸಿದ್ದಾರೆ.
ಪೊಲೀಸರು ಕೂಡ ಪ್ರಾಥಮಿಕ ತನಿಖೆ ನಡೆಸುತ್ತಿರುವಾಗಲೇ
ಮಾಜಿ ಶಾಸಕರು ದುಷ್ಕರ್ಮಿಗಳನ್ನು ಹಿಂದುಗಳು ಎಂಬ ಭಾವನೆಯಲ್ಲಿ ಮಾತನಾಡಿ ,ಕೋಮು ವೈಶಮ್ಯ ಕೆರಳಿಸುವ ಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಾಜಿ ಸಚಿವರಾಗಿ ಯು.ಟಿ ಖಾದರ್ ಅವರು ಸಂಯಮದಿಂದ ವರ್ತಿಸಿ ಶಾಂತಿ ಸೌಹಾರ್ದ ತೆಗೆ ಸಹಕರಿಸಬೇಕು.ಪ್ರಚೋದನಾತ್ನಕ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.