Recent Posts

Monday, January 20, 2025
ಸುದ್ದಿ

ಪುತ್ತೂರು : ಜು.31ರಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಾಜ ಘಟಕ ಹಾಗೂ ಕೆಸರುಗದ್ದೆ ಸಮಿತಿ ಸಾಜ ಇದರ ಜಂಟಿ ಆಶ್ರಯದಲ್ಲಿ ಕೆಸರ್‍ಡ್ ಒಂಜಿ ದಿನ-2022 ಕೆಸರುಗದ್ದೆ ಕ್ರೀಡಾಕೂಟ – ಕಹಳೆ ನ್ಯೂಸ್

ಪುತ್ತೂರು : ಜು.31ರಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಾಜ ಘಟಕ ಹಾಗೂ ಕೆಸರುಗದ್ದೆ ಸಮಿತಿ ಸಾಜ ಇದರ ಜಂಟಿ ಆಶ್ರಯದಲ್ಲಿ ಕೆಸರ್‍ಡ್ ಒಂಜಿ ದಿನ-2022 ಕೆಸರುಗದ್ದೆ ಕ್ರೀಡಾಕೂಟ ಮಹಿಳೆಯರ ಹಾಗೂ ಪುರುಷರ ಸಾರ್ವಜನಿಕ ಹಿಂದೂ ಬಾಂಧವರ ಕೆಸರ್‍ಡ್ ಒಂಜಿ ದಿನ-2022 ಕೆಸರುಗದ್ದೆ ಕ್ರೀಡಾಕೂಟ ಕಾಡ್ಲ ವಠಾರದ ಗದ್ದೆಯಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಪ್ರತಿಷ್ಠಿತ ತಂಡವಾದ ಶಬರಿ ಟೈಗರ್ಸ್ ವತಿಯಿಂದ ನಾಸಿಕ್ ಬ್ಯಾಂಡ್ ನ ವಿಶೇಷ ಪ್ರದರ್ಶನದೊಂದಿಗೆ ಅದ್ದೂರಿಯ ಮೆರವಣಿಗೆ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.
ಮಹಿಳೆಯರಿಗೆ , ಪುರುಷರಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾ ಸ್ಫರ್ಧೆಗಳು ನಡೆಯಲಿದ್ದು, ಪುತ್ತೂರಿನ ತಂಡದಿಂದ ಆಕರ್ಷಕ ಅಟ್ಟಿಮಡಿಕೆ ಒಡೆಯುವ ವಿಶೇಷ ಕ್ರೀಡಾ ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ವೈಟ್ ಲಿಫ್ಟರ್ ರಜತ್ ರೈ ಹಾಗೂ ಪುತ್ತೂರು ಮೆಸ್ಕಾಂನ ಪವರ್ ಮೆನ್ ಆಗಿರುವ ಉಮೇಶ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.