Tuesday, January 21, 2025
ಸುದ್ದಿ

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕಂಚಿಗೆ ಮುತ್ತಿಟ್ಟ ಕನ್ನಡಿಗ –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ವೇಟ್ ಲಿಫ್ಟಿಂಗ್ನಲ್ಲಿ ಕನ್ನಡಿಗರಾದ ಪಿ. ಗುರುರಾಜ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ. 61 ಕೆಜಿ ವಿಭಾಗದಲ್ಲಿ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಗುರುರಾಜ್ ಪೂಜಾರಿ ಈ ಸಾಧನೆ ಮಾಡಿದ್ದಾರೆ. ಮೂಲತಃ ಕುಂದಾಪುರದವರಾಗಿರುವ ಗುರುರಾಜ್ ಪೂಜಾರಿ, ಫೈನಲ್ನಲ್ಲಿ ಕೆನಡಾದ ಯೂರಿ ಸಿಮರ್ಡ್ ವಿರುದ್ಧ ಸೆಣಸಾಡಿದರು. ಗುರುರಾಜ್ ಅವರು ತಮ್ಮ ಮೊದಲ ಸ್ನ್ಯಾಚ್ ಪ್ರಯತ್ನದಲ್ಲಿ 114 ಕೆಜಿ ಮತ್ತು ಎರಡನೇ ಸುತ್ತಿನಲ್ಲಿ 118 ಕೆಜಿ ಎತ್ತಿದರು. ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ, ಭಾರತೀಯ ವೇಟ್‌ಲಿಫ್ಟರ್ ಗುರುರಾಜ್ ಪೂಜಾರಿ ತಮ್ಮ ಮೂರನೇ ಪ್ರಯತ್ನದಲ್ಲಿ 151 ಕೆಜಿ ಎತ್ತುವ ಮೂಲಕ ಕಂಚಿನ ಪದಕವನ್ನು ಗೆದ್ದಿದ್ದಾರೆ. ಮಲೇಷ್ಯಾದ ಅಜ್ನಿಲ್ ಬಿನ್ ಬಿಡೀನ್ ಮುಹಮ್ಮದ್ 61 ಕೆಜಿಯ ವೇಟ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಜಯಿಸಿದರು. ಪಪುವಾ ನ್ಯೂಗಿನಿಯಾದ ಮೋರಿಯಾ ಬಾರು ಬೆಳ್ಳಿಗೆ ಮುತ್ತಿಕ್ಕಿದರು. ಆದರೆ, ಕಂಚಿಗಾಗಿ ಕೆನಡಾದ ಯೂರಿ ಸಿಮರ್ಡ್ ವಿರುದ್ಧ ಗುರುರಾಜ್ ಹಣಾಹಣಿ ನಡೆಸಿದರು. ಕೊನೆಗೂ ಹೆಮ್ಮೆಯ ಕನ್ನಡಿಗ ಕುಂದಾಪುರದ ಗುರುರಾಜ ಪೂಜಾರಿ ಕಂಚಿನ ಪದಕಕ್ಕೆ ಕೊರಳೊಡಿದ್ದರು.