Sunday, November 24, 2024
ಸುದ್ದಿ

ಪಣಂಬೂರು ಘಟಕದ ವತಿಯಿಂದ ವನಮಹೋತ್ಸವ ಆಚರಣೆ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಣಂಬೂರು ಘಟಕದ ವತಿಯಿಂದ ಶ್ರೀ ನಂದನೇಶ್ವರ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷದಲ್ಲಿ ಸುಮಾರು 1000 ಸಸಿಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಗಿಡ ನೆಟ್ಟು ಹಸಿರು ಬೆಳೆಸಿದಲ್ಲಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಸಿಗಳನ್ನು ನೆಡುವ ಕಾರ್ಯ ಯೋಜನೆ ಸಿದ್ಧಪಡಿಸಲಾಗಿದೆ ಎಂದು ನುಡಿದರು. ದೇವಸ್ಥಾನದ ಆವರಣದಲ್ಲಿ ಬಿಲ್ವ ಪತ್ರೆ ಗಿಡಗಳನ್ನು ನೆಡಲಾಯಿತು ಹಾಗೂ ಗೃಹರಕ್ಷಕರಿಗೆ ಮಾವು, ನೇರಳೆ, ಪೇರಳೆ, ಹಲಸು, ಹೆಬ್ಬಲಸು ಮುಂತಾದ ಗಿಡಗಳನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ದೇವರುತ ಶರ್ಮ, ಪರಮೇಶ್ವರ ಭಟ್, ಸಮಿತಿ ಅಧ್ಯಕ್ಷರಾದ ಅನಂತ ಐತಳ್, ಪಣಂಬೂರು ಘಟಕದ ನಿವೃತ್ತ ಘಟಕಾಧಿಕಾರಿಯಾದ ಶ್ರೀ ಹರೀಶ್ ಆಚಾರ್, ಪ್ರಭಾರ ಘಟಕಾಧಿಕಾರಿ ಶ್ರೀ ಶಿವಪ್ಪ ನಾಯ್ಕ್ ಮತ್ತು ಪಣಂಬೂರು ಘಟಕದ ಗೃಹರಕ್ಷಕರಾದ ಗಂಗಾಧರ್ ಎಸ್. ಕೆ, ಜಗದೀಶ್, ರಾಘವೇಂದ್ರ, ಪ್ರೇಮ, ದಿನೇಶ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.