Tuesday, January 21, 2025
ಉಡುಪಿಕ್ರೈಮ್ಸುದ್ದಿ

 ಉಡುಪಿಯಲ್ಲೂ ನಡೆಯಿತಾ ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್..? – ದೂರು ದಾಖಲು ; ಕಾಪು ಬಜರಂಗದಳದ ಪ್ರಮುಖ ಸುಧೀರ್ ಸೋನಾ ಮನೆಗೆ ಆಯುಧದೊಂದಿಗೆ ಬಂದ ನಾಲ್ಕು ಮಂದಿ ಯುವಕರ ತಂಡ : ಓರ್ವ ಪೋಲಿಸ್ ವಶಕ್ಕೆ – ಕಹಳೆ ನ್ಯೂಸ್

ಉಡುಪಿ, ಜು 31 : ಕಾಪು ಬಜರಂಗದಳದ ಪ್ರಮುಖ ಸುಧೀರ್ ಸೋನಾ ಮನೆಗೆ ಭಾನುವಾರ ಬೆಳಿಗ್ಗೆ ನಾಲ್ಕು ಮಂದಿ ಯುವಕರ ತಂಡ ಆಯುಧದೊಂದಿಗೆ ಬಂದಿರುವ ಘಟನೆ ನಡೆದಿದ್ದು, ಈ ಬಗ್ಗೆ ದೂರು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಧೀರ್ ಸೋನಾ ಮನೆಗೆ ಬಂದ ಯುವಕರ ತಂಡ, ‘ಆಶಿಫ್’ ಎಂಬವರು ಮೇಲೆ ಕಾರಿನಲ್ಲಿ ಇದ್ದಾರೆ‌ ಅವರಿಗೆ ನಿಮ್ಮ ಬಳಿ ಮಾತನಾಡಲು ಇದೆ ಎಂದು ಮನೆಯಿಂದ ಹೊರಗೆ ಬರುವಂತೆ ಹೇಳಿದ್ದಾರೆ.ಇನ್ನು ಯುವಕರ ಮಾತಿನಿಂದ ಅನುಮಾನಗೊಂಡು ಸುಧೀರ್ ಸೋನಾ ಅವರು ಮನೆಯಿಂದ ಹೊರಹೋಗದೇ ತಕ್ಷಣವೇ ಕಾಪು ಪೋಲಿಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ. ಯುವಕರು ಸುಧಿರ್ ಮನೆಯಿಂದ ಹಿಂತಿರುಗುವ ವೇಳೆ ಯುವಕರ ಬಳಿ ಹರಿತವಾದ ಆಯುಧ ಇರುವುದು ಸುಧಿರ್ ಅವರ ಪತ್ನಿಯ ಗಮನಕ್ಕೆ ಬಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಓರ್ವನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.