Thursday, January 23, 2025
ಸುದ್ದಿ

ಪೆರಾಜೆ : 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪೆರಾಜೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪೆರಾಜೆ ಇದರ ಆಶ್ರಯದಲ್ಲಿ ಆ .31ರಂದು ದ.ಕ.ಜಿ.ಪಂ.ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆಯಲಿರುವ 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಗೆ ಪೂಜೆ ಮಾಡಿ ಬಳಿಕ ಹಂಚಲು ಪ್ರಾರಂಭಿಸಲಾಯಿತು.

ಕಾರ್ಯಕ್ರಮದಲ್ಲಿ ಪೆರಾಜೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷರಾದ ಹರೀಶ್ ರೈ ಪಾನೂರು, ಕಾರ್ಯದರ್ಶಿ ಪ್ರಶಾಂತ್ ನಡುಗುಡ್ಡೆ, ಕೋಶಾಧಿಕಾರಿ ರಾಘವ ಗೌಡ, ಶ್ರೀ ಗುಡ್ಡ ಚಾಮುಂಡೇಶ್ವರೀ ಸೇವಾ ಟ್ರಸ್ಟ್ (ರಿ.) ಪೆರಾಜೆ ಇದರ ಅಧ್ಯಕ್ಷರಾದ ಮಾಧವ ಕುಲಾಲ್, ಶ್ರೀನಿವಾಸ ಪೂಜಾರಿ, ರಾಜರಾಮ್ ಕಡೂರು, ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರು, ಹಾಗೂ ಪೆರಾಜೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.