ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ 36 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿ 1 ರೂ.ನ 63 ನಾಣ್ಯ: ವೈದ್ಯರೇ ಶಾಕ್!- ಕಹಳೆ ನ್ಯೂಸ್
ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ 36 ವರ್ಷದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 1 ರೂಪಾಯಿಯ 63 ನಾಣ್ಯಗಳನ್ನು ಕಂಡು ವೈದ್ಯರೇ ಬೆಚ್ಚಿಬಿದ್ದ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದೆ.
ತೀವ್ರ ಹೊಟ್ಟೆ ನೋವು ಅಂತ ವ್ಯಕ್ತಿಯೊಬ್ಬನನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಆತನ ಸ್ಥಿತಿ ಕಂಡು ವೈದ್ಯರು ಸ್ಕ್ಯಾನ್ ಮಾಡಿಸುವಂತೆ ಸೂಚಿಸಿದ್ದಾರೆ.
ಸ್ಕ್ಯಾನಿಂಗ್ ನಲ್ಲಿ ಹೊಟ್ಟೆಯಲ್ಲಿ ಲೋಹದ ಗಡ್ಡೆಯಂತಹ ವಸ್ತು ಪತ್ತೆಯಾಗಿದೆ. ಕೂಡಲೇ ಶಸ್ತ್ರಚಿಕಿತ್ಸೆಗೆ ಮುಂದಾದ ಪೊಲೀಸರು ‘ ಎಂಡೋಸ್ಕೋಪಿಕ್ ಕಾರ್ಯವಿಧಾನದ ಸಹಾಯದಿಂದ 2 ದಿನಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ವ್ಯಕ್ತಿಯ ಹೊಟ್ಟೆಯಿಂದ 63 ನಾಣ್ಯಗಳನ್ನು ಹೊರತೆಗೆದಿದ್ದಾರೆ.
ಹೊಟ್ಟೆ ನೋವಿನಿಂದ ವ್ಯಕ್ತಿಯೊಬ್ಬ ನಮ್ಮ ಆಸ್ಪತ್ರೆಗೆ ಬಂದಿದ್ದ . ಅವನ ಎಕ್ಸ್ – ರೇ ಮಾಡಿಸಿದಾಗ ಅವನು ನಾಣ್ಯಗಳನ್ನು ನುಗ್ಗಿರುವುದು ಪತ್ತೆಯಾಗಿದೆ . ಈ ಕುರಿತು ವಿಚಾರಿಸಿದಾಗ ಆತ 10-15 ನಾಣ್ಯಗಳನ್ನು ನುಂಗಿರುವುದನ್ನು ಒಪ್ಪಿಕೊಂಡಿದ್ದು, ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿದೆ. ಈತ ಆತ ಚೇತರಿಸಿಕೊಂಡಿದ್ದಾನೆ ಎಂದು ವೈದ್ಯ ನರೇಂದ್ರ ಭಾರ್ಗವ್ ತಿಳಿಸಿದರು.