Recent Posts

Tuesday, January 21, 2025
ಸುದ್ದಿ

ಪೊಳಲಿಯಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಜಿಲ್ಲಾಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ 3 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ — ಕಹಳೆ ನ್ಯೂಸ್

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ರಾಜರಾಜೇಶ್ವರಿ ಪ್ರೌಢ ಶಾಲೆ, ಪೊಳಲಿಯಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಜಿಲ್ಲಾಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ 3 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅದರಲ್ಲಿ ಪ್ರೌಢ ಶಾಲಾ ವಿಭಾಗದ ಹುಡುಗರು- ಪ್ರಣೀಲ್ ರೈ, 10ನೇ ತರಗತಿ(ಪ್ರಕಾಶ್ ಕುಮಾರ್ ರೈ ಮನವಳಿಕೆ ಗುತ್ತು ಮತ್ತು ಸತ್ಯಲತ ಪ್ರಕಾಶ್ ಇವರ ಪುತ್ರ)-ಪ್ರಥಮ ಸ್ಥಾನ, ಧನುಷ್‌ರಾಮ್,10ನೇ ತರಗತಿ(ಕಿಯೋನಿಕ್ಸ್ನ ಮಾಲಕ ದಿನೇಶ್ ಪ್ರಸನ್ನ ಮತ್ತು ಉಮಾ.ಡಿ.ಪ್ರಸನ್ನ ಇವರ ಪುತ್ರ) – ದ್ವಿತೀಯ ಸ್ಥಾನ ಹಾಗೂ ಪ್ರೌಢ ಶಾಲಾ ವಿಭಾಗದ ಹುಡುಗಿಯರ ವಿಭಾಗದಲ್ಲಿ ಸುಶ್ಮಿತ.ಟಿ.ರಾವ್, 9ನೇ ತರಗತಿ, (ತ್ರಿವಿಕ್ರಮ ರಾವ್ ಮತ್ತು ಶಾರದಾ ಇವರ ಪುತ್ರಿ)–ಪಂಚಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.