Wednesday, January 22, 2025
ಸುದ್ದಿ

ಕಾರ್ಕಳ : ಕಲ್ಲು ಅನ್‌ಲೋಡ್ ಮಾಡುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಟಿಪ್ಪರ್ ಲಾರಿ ಚಾಲಕ ಮೃತ್ಯು – ಕಹಳೆ ನ್ಯೂಸ್

ಕಾರ್ಕಳ : ಸೂಡ ಗ್ರಾಮದ ಸುರೇಶ್ ಶೆಟ್ಟಿ ಎಂಬವರ ಮಾಲಕತ್ವದ ಜಲ್ಲಿ ಕ್ರಶರ್ ಘಟಕದಲ್ಲಿ ಟಿಪ್ಪರ್ ಲಾರಿ ಕಲ್ಲು ಅನ್‌ಲೋಡ್ ಮಾಡುತ್ತಿದ್ದ ವೇಳೆ ಚಾಲಕನ ನಿಯಂತ್ರಣತಪ್ಪಿ ಆಳವಾದ ಕಂದಕ್ಕೆ ಉರುಳಿಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೂಡ ಗ್ರಾಮದ ಸುರೇಶ್ ಶೆಟ್ಟಿ ಎಂಬವರು ತನ್ನ ಕ್ರಶರನ್ನು ಕೇರಳ ಮೂಲದ ವ್ಯಕ್ತಿಗೆ ಲೀಸ್ ನೀಡಿದ್ದು, ಈ ಕ್ರಶರ್‌ನಲ್ಲಿ ಮೊಹಮ್ಮದ್ ಆಸಿಫ್ ಟಿಪ್ಪರ್ ಚಾಲಕ ಆಗಿದ್ದ. ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ಕಲ್ಲುಗಳನ್ನು ತುಂಬಿಸಿಕೊAಡು ಜಲ್ಲಿ ಕ್ರಶರ್‌ಗೆ ಅನ್‌ಲೋಡ್ ಮಾಡುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಚಾಲಕ ಕಲ್ಲು ಅನ್‌ಲೋಡ್ ಮಾಡಲು ಲಾರಿಯನ್ನು ರಿವರ್ಸ್ ತೆಗೆಯುತ್ತಿದ್ದ ವೇಳೆ ಲಾರಿ ಹಿಮ್ಮಖವಾಗಿ ಚಲಿಸಿ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ. ಕಲ್ಲು ಸಹಿತ ಉರುಳಿಬಿದ್ದ ಲಾರಿಯಲ್ಲಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕಾರ್ಕಳ ಗ್ರಾಮಾಂತರ ಠಾಣೆಯ ಎಸ್‌ಐ ತೇಜಸ್ವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.