Wednesday, January 22, 2025
ಸುದ್ದಿ

ಮಡಿಕೇರಿ – ಮಂಗಳೂರು ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ– ಕಹಳೆ ನ್ಯೂಸ್

ಮಡಿಕೇರಿ: ಕೊಡಗು ಜಿಲ್ಲೆಯ ಕೆಲವೆಡೆ ರಾತ್ರಿ ಸುರಿದ ಧಾರಾಕಾರವಾಗಿ ಮಳೆಯಿಂದಾಗಿ ದೇವರಕೊಲ್ಲಿ ಹಾಗೂ ಕೊಯನಾಡು ನಡುವೆ ರಸ್ತೆಯಲ್ಲಿ ಬಿರುಕುಗಳು ಮೂಡಿವೆ.
ಇದರಿಂದ ಖಾಸಗಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆದ್ದಾರಿಯ ಸ್ಥಿತಿಯನ್ನು ಇಂದು ಪರಿಶೀಲಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಗಡಿಭಾಗವಾದ ಕಲ್ಲುಗುಂಡಿ, ಸಂಪಾಜೆ, ಗೂನಡ್ಕ ಗ್ರಾಮಗಳ ಹಲವು ಭಾಗಗಳು ಜಲಾವೃತಗೊಂಡಿವೆ. ಪಯಸ್ವಿನಿ ನದಿ ಮತ್ತಷ್ಟು ಉಕ್ಕೇರಿ ಹರಿಯುತ್ತಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು