Tuesday, January 21, 2025
ಸುದ್ದಿ

ಕಾಮನ್‌ವೆಲ್ತ್ ಗೇಮ್ಸ್:‌ ಹೈಜಂಪ್‌ನಲ್ಲಿ ಕಂಚಿನ ಪದಕ ಗೆದ್ದ ʻತೇಜಸ್ವಿನ್ ಶಂಕರ್ʼ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬರ್ಮಿಂಗ್‌ಹ್ಯಾಮ್:‌ ಭಾರತದ ತೇಜಸ್ವಿನ್ ಶಂಕರ್ ಅವರು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಪುರುಷರ ಹೈಜಂಪ್ ಫೈನಲ್‌ನಲ್ಲಿ ಬುಧವಾರ ಕಂಚಿನ ಪದಕ ಗೆದ್ದಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಹೈಜಂಪ್ ಪದಕ ಗೆದ್ದ ಮೊದಲ ಭಾರತ ಎಂಬ ಹೆಗ್ಗಳಿಕೆಗೆ ಶಂಕರ್ ಪಾತ್ರರಾದರು.

ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕಾಗಿ ಸ್ಪರ್ಧಿಸುತ್ತಿರುವ ತೇಜಸ್ವಿನ್ ಹೈಜಂಪ್‌ನಲ್ಲಿ 2.22 ಮೀ. ಎತ್ತರ ಜಿಗಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಇನ್ನೂ, ನ್ಯೂಜಿಲೆಂಡ್‌ನ ಹ್ಯಾಮಿಶ್ ಕೆರ್ ಚಿನ್ನ ಗೆದ್ದರೆ, ಆಸ್ಟ್ರೇಲಿಯಾದ ಬ್ರಾಂಡನ್ ಸ್ಟಾರ್ಕ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಈ ಇಬ್ಬರೂ 2.25 ಮೀಟರ್‌ಗಳಷ್ಟು ಎತ್ತರ ಜಿಗಿದಿದ್ದಾರೆ.