Recent Posts

Sunday, January 19, 2025
ಸುದ್ದಿ

Breaking News : ಸುಳ್ಯದಲ್ಲಿ ಕೋಮು ಪ್ರಚೋದನಾಕಾರಿ ಭಾಷಣ : ಹಿಂ.ಜಾವೇ ಮುಖಂಡ ಜಗದೀಶ ಕಾರಂತ್ ಸೇರಿ ಹನ್ನೆರಡು ಜನರ ಮೇಲಿನ ಪ್ರಕರಣ ಖುಲಾಸೆಗೊಳಿದ ನ್ಯಾಯಾಲಯ – ಕಹಳೆ ನ್ಯೂಸ್

ಸುಳ್ಯ : ಹಿಂದೂ ಜಾಗರಣಾ ವೇದಿಕೆಯ ಮುಖಂಡ ಜಗದೀಶ್ ಕಾರಂತರು 2009 ರ ಫೆಬ್ರವರಿ 12 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂದೆ ನಡೆದ ಹಿಂದೂ ಜನ ಜಾಗೃತಿ ಸಮಾವೇಶದಲ್ಲಿ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸುಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಐಪಿಸಿ ಸೆಕ್ಷನ್ 120(ಬಿ) , 153 , 153(ಎ) 153 (ಬಿ), 504, 506, 34 ಅಡಿಯಲ್ಲಿ ಜಗದೀಶ್ ಕಾರಂತ್, ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹನ್ನೆರಡು ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣ ಸುಧೀರ್ಘ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು ಪ್ರಕರಣವನ್ನು ಖುಲಾಸೆಗೊಳಿಸಿ, ಎಲ್ಲರನ್ನೂ ಆರೋಪ ಮುಕ್ತಗೊಳಿಸಿದೆ. ಆರೋಪಿಗಳ ಪರ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದರು.