ಉಡುಪಿ : ಸಾಲು ಸಾಲು ಹಬ್ಬಗಳ ಸಂಭ್ರಮದಲ್ಲಿರುವ ಕರಾವಳಿಗರಿಗೆ ಶಂಕರಪುರ ಮಲ್ಲಿಗೆ ಭಾರೀ ಶಾಕ್ ನೀಡಿದ್ದು, ಮಲ್ಲಿಗೆಯ ದರ ಎರಡು ಸಾವಿರ ರೂ ಸನಿಹಕ್ಕೆ ಬಂದಿದೆ. ಸೋಮವಾರ ಕಟ್ಟೆಯಲ್ಲಿ ಮಲ್ಲಿಗೆಯ ದರ ಅಟ್ಟೆಗೆ 2100 ರೂ. ನಿಗದಿಯಾಗಿದ್ದು,2500ರೂ.ತನಕ ಮಾರಾಟವಾಗುತ್ತಿದೆ.ಇದು ಈ ಬಾರಿಯ ಹೆಚ್ಚಿನ ದರವಾಗಿದೆ.
ಶಂಕರಪುರ ಕಟ್ಟೆಯಲ್ಲಿ ಮಾರಾಟಗೊಳ್ಳುವ ಮಲ್ಲಿಗೆ ದರವಾಗಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಮಲ್ಲಿಗೆ ದರಗಳು ಬದಲಾವಣೆಗೊಳ್ಳುತ್ತಿರುತ್ತದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಮಲ್ಲಿಗೆಯ ದರ ಕಡಿಮೆಯಾಗಿರುತ್ತದೆ.
ನಾಳೆ ವರಮಹಾಲಕ್ಷ್ಮಿ ಪೂಜೆಯೂ ಇದ್ದು, ಇದೂ ಕೂಡ ಬೆಲೆ ಏರಿಕೆಗೆ ಒಂದು ಕಾರಣವಾದರೆ, ಈ ಬಾರಿ ಭಾರೀ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದ್ದು ಇದರಿಂದಾಗಿ ಮಲ್ಲಿಗೆಯ ದರ ಹೆಚ್ಚಾಗಿದೆ ಎನ್ನಲಾಗಿದೆ.