Recent Posts

Sunday, January 19, 2025
ದಕ್ಷಿಣ ಕನ್ನಡರಾಜ್ಯಸುದ್ದಿಸುಳ್ಯ

ಮೇಘಸ್ಫೋಟಕ್ಕೆ ಸುಳ್ಯದ 4 ಗ್ರಾಮಗಳು ತತ್ತರ ; ರಾತ್ರಿ ಇದ್ದ ಅಂಗಡಿ ಬೆಳಗ್ಗೆ ಮಾಯ! – ಕಹಳೆ ನ್ಯೂಸ್

ಸುಳ್ಯ : ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದ್ದು, ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ನೋಡಿರದ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಜನ ಈ ಬಾರಿಯ ಮಳೆಗೆ ತತ್ತರಿಸಿ ಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ 4 ಗ್ರಾಮಗಳ ಜನ ತೀವ್ರ ಆತಂಕಕ್ಕೀಡಾಗಿದ್ದಾರೆ. ಹರಿಹರ, ಕೊಲ್ಲಮೊಗ್ರು, ಬಾಳುಗೋಡು ಹಾಗೂ ಕಲ್ಮಕಾರು ಗ್ರಾಮದಲ್ಲಿ ಮೇಘಸ್ಫೋಟ ಉಂಟಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. 

ಹರಿಹರದ ಭೀಕರ ಪ್ರವಾಹಕ್ಕೆ ಹೊಳೆ ಪಕ್ಕದಲ್ಲಿದ್ದ ಅಂಗಡಿ ಹಾಗೂ ಮನೆಗಳು ಮಳೆ ನೀರಿಗೆ ಗುರುತು ಸಿಗದಂತೆ ಕೊಚ್ಚಿ ಹೋಗಿವೆ. ರಾತ್ರಿ ಹೋಗುವಾಗ ಇದ್ದ ಅಂಗಡಿ ಬೆಳಗ್ಗೆ ಬಂದು ನೋಡುವಾಗ ಮಾಯವಾಗದ್ದನ್ನು ನೋಡಿ ಸ್ಥಳೀಯರು ದಂಗಾಗಿದ್ದಾರೆ. ಹರಿದು ಬಂದ ಭಾರೀ ನೀರಿಗೆ ಹರಿಹರದಿಂದ ಬಾಳುಗೋಡು ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ನೆರೆ ನೀರಿಗೆ ರಸ್ತೆ ಅಂಚಿನಲ್ಲಿರುವ ಮಣ್ಣು ಕುಸಿದು ಬಿದ್ದಿದೆ.