Sunday, January 19, 2025
ಉಡುಪಿಕಡಬದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯಸುಳ್ಯ

ಆ. 5,6 ರಂದು ಕರಾವಳಿಯಲ್ಲಿ ‘ಆರೆಂಜ್‌ ಅಲರ್ಟ್‌’ ; ಭಾರೀ ಗಾಳಿಮಳೆ | ಕಡಬ ಹಾಗೂ ಸುಳ್ಯ ತತ್ತರ – ಕಹಳೆ ನ್ಯೂಸ್

ಮಂಗಳೂರು/ಉಡುಪಿ: ಮುಂಗಾರು ಬಿರುಸು ಪಡೆದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆ. 4ರಿಂದ 6ರ ವರೆಗೆ ಕರಾವಳಿ ಭಾಗದಲ್ಲಿ “ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ ಭಾರೀ ಮಳೆ, ಗಾಳಿ ಮತ್ತು ಸಮುದ್ರದ ಅಬ್ಬರ ಹೆಚ್ಚಿರುವ ನಿರೀಕ್ಷೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ. ಜಿಲ್ಲೆಯಾದ್ಯಂತ ಗುರುವಾರ ದಿನವಿಡೀ ಉತ್ತಮ ಮಳೆಯಾಗಿದೆ. ಮಂಗಳೂರು ನಗರ ದಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ರಾತ್ರಿ ವೇಳೆ ಮಳೆಯ ಬಿರುಸು ಹೆಚ್ಚಿತ್ತು. ಉಡುಪಿಯಲ್ಲಿ ಹಗಲು ಮೋಡದ ವಾತಾವಣ ಇದ್ದು, ಸಂಜೆಯ ಬಳಿಕ ಮಳೆಯಾಗಿದೆ.

58 ಮಂದಿ ಆಶ್ರಯ :

ಕಡಬ ಹಾಗೂ ಸುಳ್ಯ ತಾಲೂಕಿಗೆ ಸಂಬಂಧಿಸಿ ದಂತೆ ವಿವಿಧ ಕಾಳಜಿ ಕೇಂದ್ರಗಳಲ್ಲಿ ಒಟ್ಟು 58 ಮಂದಿ ಆಶ್ರಯ ಪಡೆದಿದ್ದಾರೆ. ಕಲ್ಮಕಾರು ಸರಕಾರಿ ಶಾಲೆಯಲ್ಲಿ 10 ಪುರುಷರು, 11 ಮಂದಿ ಮಹಿಳೆಯರು, ಸಂಪಾಜೆಯ ಸಜ್ಜನ ಪ್ರತಿಷ್ಠಾನದಲ್ಲಿ 8 ಪುರುಷರು ಮತ್ತು 4 ಮಂದಿ ಮಹಿಳೆಯರು, ಸುಬ್ರಹ್ಮಣ್ಯದ ಅನಘ ವಸತಿ ಗೃಹದಲ್ಲಿ 6 ಪುರುಷರು, 7 ಮಂದಿ ಮಹಿಳೆಯರು ಮತ್ತು 6 ಮಕ್ಕಳಿದ್ದಾರೆ. ಏನೆಕಲ್ಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಓರ್ವ ಪುರುಷ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಆಶ್ರಯ ಪಡೆದಿದ್ದಾರೆ.

ಜಿಲ್ಲೆಯಲ್ಲಿ 3 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 7 ಮನೆಗಳಿಗೆ ಭಾಗಶಃ ಹಾನಿ ಯಾಗಿದೆ. 34 ವಿದ್ಯುತ್‌ ಕಂಬಗಳು, 2 ಟ್ರಾನ್ಸ್‌ ಫಾರ್ಮರ್‌, 1.68 ಕಿ.ಮೀ. ವಿದ್ಯುತ್‌ ಮಾರ್ಗ (ತಂತಿ)ಕ್ಕೆ ಹಾನಿಗೀಡಾಗಿದೆ.

ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ನಿರ್ವಹಿಸಲು ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಸನ್ನದ್ಧವಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣ ದಳ (ಎನ್‌ಡಿಆರ್‌ಎಫ್‌)ದ 20 ಮಂದಿಯ ತಂಡ ಸುಬ್ರಹ್ಮಣ್ಯದಲ್ಲಿ ಸನ್ನದ್ಧವಾಗಿದೆ. ರಾಜ್ಯ ವಿಪತ್ತುದಳ (ಎಸ್‌ಡಿಆರ್‌ಎಫ್‌)ದ 55 ಮಂದಿಯ ತಂಡ ತಯಾರಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಗ್ನಿಶಾಮಕ ದಳ ಕಾರ್ಯಪ್ರವೃತ್ತವಾಗಿದೆ.