Recent Posts

Friday, November 22, 2024
ಕ್ರೈಮ್ಪುತ್ತೂರುರಾಜ್ಯಸುದ್ದಿ

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : 10 ದಿನ ಕಳೆದರೂ ಹಂತಕರ ಪತ್ತೆಯಿಲ್ಲ..  ಉಪ್ಪಳ ಸೋಂಕಾಲು ನಿವಾಸಿ ವಶಕ್ಕೆ..! ಸಾಕ್ಷ್ಯದ ಸವಾಲು? – ಕಹಳೆ ನ್ಯೂಸ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್‌ ನೆಟ್ಟಾರು ಹತ್ಯೆಯಾಗಿ 10 ದಿನ ಕಳೆದರೂ ಹಂತಕರ ಪತ್ತೆ ಇನ್ನೂ ಆಗಿಲ್ಲ. ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಕೃತ್ಯ ಎಸಗಿರುವ ಮೂವರ ಬಂಧನವಾಗಿಲ್ಲ. ಹಂತಕರು ಕೇರಳ ಮೂಲದವರು ಎಂಬ ಸುಳಿವು ಸಿಕ್ಕಿದ್ದು ಕೇರಳವನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಆದರೆ ನಿರೀಕ್ಷಿತ ಪ್ರಗತಿ ಕಂಡಿಲ್ಲ.

ಸಾಕ್ಷ್ಯದ ಸವಾಲು? :

ಕೃತ್ಯ ಎಸಗಿದವರು ಬಾಡಿಗೆ ಹಂತಕರು ಎನ್ನುವ ಅನುಮಾನ ಇದ್ದು, ಸಾಕಷ್ಟು ಪೂರ್ವಸಿದ್ಧತೆ ನಡೆಸಿ ಜಾಡು ಸಿಗದಂತೆ ಎಚ್ಚರ ವಹಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸ್ಥಳದಲ್ಲಿ ಸಿಸಿ ಕೆಮರಾಗಳು ಇಲ್ಲದ ಕಾರಣ ಘಟನೆಯ ಬಗ್ಗೆ ಚಿತ್ರಣ ದೊರೆತಿಲ್ಲ.

ಬೆಳ್ಳಾರೆ ಠಾಣೆಯಲ್ಲಿ ಸಭೆ :

ಎಡಿಜಿಪಿ ಆಲೋಕ್‌ ಕುಮಾರ್‌ ಗುರುವಾರ ಬೆಳ್ಳಾರೆ ಠಾಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ, ಡಿವೈಎಸ್ಪಿ ಗಾನ ಪಿ. ಕುಮಾರ್‌, ಬೆಳ್ಳಾರೆ ಎಸ್‌ಐ ಸುಹಾಸ್‌ ಅವರೊಂದಿಗೆ ತನಿಖೆಯ ಬಗ್ಗೆ ಮಾಹಿತಿ ಪಡೆದರು.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಆಲೋಕ್‌ ಕುಮಾರ್‌, ಮಸೂದ್‌ ಹಾಗೂ ಪ್ರವೀಣ್‌ ನೆಟ್ಟಾರು ಕುರಿತ ಪ್ರಕರಣದ ಪ್ರಗತಿ ಯಾವ ಹಂತದಲ್ಲಿದೆ ಎಂಬುದನ್ನು ಅವಲೋಕಿಸಲು ಆಗಮಿಸಿದ್ದೇನೆ. ಒಟ್ಟು ತನಿಖೆಯ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬ ಬಗ್ಗೆಯೂ ನಿರ್ದೇಶನ ನೀಡಲಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಿಸಿ ಕೆಮರಾ ಅಳವಡಿಸುವಿಕೆ ಮುಂತಾದ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ನಿರ್ದೇಶನ ನೀಡಿದ್ದೇನೆ. ಪ್ರಕರಣವನ್ನು ಎನ್‌ಐಎಗೆ ನೀಡಿದ್ದರೂ ಕರ್ನಾಟಕ ಪೊಲೀಸರಾಗಿ ನಾವು ಅವರಿಗೆ ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಎನ್‌ಐಎಯವರು ನಮ್ಮ ಜತೆಗೆ ಸಂಪರ್ಕದಲ್ಲಿದ್ದಾರೆ. ಪ್ರಕರಣದ ಕುರಿತ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡಿದ್ದೇವೆ ಎಂದರು.

ಉಪ್ಪಳ ನಿವಾಸಿ ವಶಕ್ಕೆ:

ಕುಂಬಳೆ: ಪ್ರವೀಣ್‌ ಹತ್ಯೆ ಪ್ರಕರಣದಲ್ಲಿ ಕೊಲೆ ಆರೋಪಿಗಳಿಗೆ ವಾಸಕ್ಕೆ ವ್ಯವಸ್ಥೆ ಮಾಡಿದ್ದ ಉಪ್ಪಳ ಮಂಗಲ್ಪಾಡಿ ಸೋಂಕಾಲು ನಿವಾಸಿಯೋರ್ವನನ್ನು ಕರ್ನಾಟಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮೂಲತಃ ಕರ್ನಾಟಕ ದವನಾದ ಈತ ಕಾರ್ಮಿಕನಾಗಿದ್ದು, ಸೋಂಕಾಲಿನಲ್ಲಿ ವಾಸವಾಗಿದ್ದಾನೆ.