Recent Posts

Sunday, January 19, 2025
ಸುದ್ದಿ

ಥಾಯ್ಲೆಂಡ್: ಗುಹೆಯಿಂದ ಆರು ಬಾಲಕರು ಹೊರಕ್ಕೆ! – ಕಹಳೆ ನ್ಯೂಸ್

ಬ್ಯಾಂಕಾಕ್(ಜು.8): ಮಹತ್ವದ ಬೆಳವಣಿಗೆಯೊಂದರಲ್ಲಿ ಥಾಯ್ಲೆಂಡ್ ನ ಗುಹೆಯೊಂದರಲ್ಲಿ ಸಿಲುಕಿರುವ ಫುಟ್ಬಾಲ್ ಆಟಗಾರರ ಪೈಕಿ ಆರು ಬಾಲಕರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದೆ.

ನುರಿತ ಈಜುಗಾರರ ಸಹಾಯದಿಂದ ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆ ಕಳೆದ 10 ದಿನಗಳಿಂದಲೂ ನಡೆಯುತ್ತಿದೆ. ದೇಶಿ ಮತ್ತು ವಿದೇಶಿ ನುರಿತ ತಂತ್ರಜ್ಞರು ನಿರಂತರವಾಗಿ ಪ್ರಯತ್ನ ನಡೆಸಿ ಆರು ಬಾಲಕರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ರಕ್ಷಿಸಲ್ಪಟ್ಟ ಆರು ಬಾಲಕರು ತುಂಬ ಬಳಲಿದ್ದು, ಕುಡಲೇ ಆವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಹೆಯಲ್ಲಿ ಇನ್ನೂ ಆರು ಬಾಲಕರು ಮತ್ತು ಓರ್ವ ಕೋಚ್ ಸಿಲುಕಿಕೊಂಡಿದ್ದು, ಅವರನ್ನು ಹೊರತೆಗೆಯಲು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು