Recent Posts

Monday, January 20, 2025
ಸುದ್ದಿ

ಜನನ, ಮರಣಗಳ ನೋಂದಣಿ ನಿಯಮಾವಳಿಗಳಿಗೆ ತಿದ್ದುಪಡಿ; ಕಿರಿಕಿರಿ ತಪ್ಪಿಸುವಂತೆ ಡಿಸಿಗೆ ಮನವಿ-ಕಹಳೆ ನ್ಯೂಸ್

ಉಡುಪಿ : ಇತ್ತೀಚೆಗೆ ಕರ್ನಾಟಕ ಜನನ ಮತ್ತು ಮರಣಗಳ ನೋಂದಣಿ ನಿಯಮಾವಳಿಗಳಿಗೆ ತಿದ್ದುಪಡಿ ತಂದು, ಈ ಹಿಂದೆ ಜೆ.ಎಮ್.ಎಫ್.ಸಿ. ನ್ಯಾಯಾಲಯಗಳಿಗೆ ಇದ್ದ ಒಂದು ವರ್ಷಕ್ಕೆ ಮೇಲ್ಪಟ್ಟ ಜನನ- ಮರಣಗಳ ವಿಳಂಬಿತ ನೋಂದಾವಣೆಯ ಅಧಿಕಾರವನ್ನು ರದ್ದುಪಡಿಸಿ, ಅದನ್ನು ವಿಭಾಗಾಧಿಕಾರಿಗಳು/ಸಹಾಯಕ ಕಮಿಷನರ್‌ಗಳಿಗೆ ನೀಡಿ ಇತ್ತೀಚೆಗೆ ಸರಕಾರ ಅಧಿಸೂಚನೆ ಹೊರಡಿಸಿರುವುದರಿಂದ ಕಕ್ಷಿದಾರರು ಮತ್ತು ವಕೀಲರಿಗೆ, ಅದರಲ್ಲಿಯೂ ಮುಖ್ಯವಾಗಿ ಕಿರಿಯ ವಕೀಲರಿಗೆ ತೀವ್ರ ತೊಂದರೆ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಸಹಾಯಕ ಕಮಿಷನರ್ ನ್ಯಾಯಾಲಯವು ಕಂದಾಯ ಪ್ರಕರಣಗಳ ಹೊರೆಯ ಒತ್ತಡದಲ್ಲಿರುವುದಲ್ಲದೆ, ರಾಜಕೀಯ ಹಸ್ತಕ್ಷೇಪಕ್ಕೂ ಹೆಚ್ಚಿನ ಅವಕಾಶ ಇರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಸದ್ರಿ ಅಧಿಸೂಚನೆಯನ್ನು ರದ್ದುಪಡಿಸಿ, ಈ ಹಿಂದೆ ಜೆ.ಎಮ್.ಎಫ್.ಸಿ. ನ್ಯಾಯಾಲಯಗಳಿಗಿದ್ದ ಅಧಿಕಾರವ್ಯಾಪ್ತಿಯನ್ನು ಮುಂದುವರಿಸಿ ಮತ್ತೆ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಉಡುಪಿ ವಕೀಲರ ಸಂಘದ ವತಿಯಿಂದ ಇಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಮನವಿಯನ್ನು ಸೂಕ್ತ ಕ್ರಮಕ್ಕಾಗಿ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಕಳುಹಿಸಿ ಕೊಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್, ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್, ಜಂಟಿ ಕಾರ್ಯದರ್ಶಿ ಎನ್. ನಾಗರಾಜ್, ಕ್ರೀಡಾ ಕಾರ್ಯದರ್ಶಿ ರವೀಂದ್ರ ಬೈಲೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ಪೂರ್ಣಿಮ, ಅಮೃತಕಲಾ, ದೇವದಾಸ್ ಶೆಟ್ಟಿಗಾರ್, ಆಶೀದುಲ್ಲಾ, ಶಿವಾನಂದ ಅಮೀನ್, ಆಕಾಶ್, ವಕೀಲರಾದ ಪ್ರಶಾಂತ್ ಕುಲಾಲ್, ಪ್ರಜ್ವಲ್ ಶೆಟ್ಟಿ ಮತ್ತು ಅಲೆಕ್ಸ್ ಇವರು ಉಪಸ್ಥಿತರಿದ್ದರು.