Tuesday, January 21, 2025
ಸುದ್ದಿ

ಹೆತ್ತ ಮಗುವನ್ನೇ ಮಹಡಿಯಿಂದ ಎಸೆದು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ..!– ಕಹಳೆ ನ್ಯೂಸ್

ಬೆಂಗಳೂರು- ದಂತ ವೈದ್ಯೆಯೊಬ್ಬರು ತನ್ನ ಐದು ವರ್ಷದ ಕರುಳ ಕುಡಿಯನ್ನು ನಾಲ್ಕನೇ ಮಹಡಿ ಯಿಂದ ಎಸೆದು ಸಾಯಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಂಪಂಗಿ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಕೆಎಸ್ ಗಾರ್ಡನ್, ಚೆನ್ನಮ್ಮ ಶಾಲೆ ಹಿಂಭಾಗದ ಅದ್ವಿತ್ ಅಪಾರ್ಟ್‍ಮೆಂಟ್‍ನ 4ನೇ ಮಹಡಿಯಲ್ಲಿ ದಂತ ವೈದ್ಯೆ ಡಾ.ಸುಷ್ಮಾ ಹಾಗೂ ಸಾಫ್ಟ್ ವೇರ್ ಎಂಜಿನಿಯರ್ ಕಿರಣ್ ದಂಪತಿ 5 ವರ್ಷದ ಧೃತಿ ಎಂಬ ಮಗಳೊಂದಿಗೆ ವಾಸವಾಗಿದ್ದಾರೆ.

ಮಗು ಧೃತಿ ಬುದ್ದಿ ಮಾಂದ್ಯವಾಗಿದ್ದರಿಂದ ತಮ್ಮ ವೃತ್ತಿ ಅಭ್ಯಾಸ ಮಾಡಲು ತೊಂದರೆಯಾಗುತ್ತಿದೆ ಎಂದು ಭಾವಿಸಿ ಸುಷ್ಮಾ ನಿನ್ನೆ ಸಂಜೆ 4ನೇ ಮಹಡಿಯಿಂದ ಮಗುವನ್ನು ಎಸೆದು, ನಂತರ ಮಹಡಿಯಿಂದ ತಾನೂ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಾಪಾಡಿ ಎಂದು ಕೂಗಿಕೊಳ್ಳುತ್ತಿದ್ದ ಸುಷ್ಮಾರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಮಗು ಧೃತಿ ಸಾವನ್ನಪ್ಪಿದೆ.

ಈ ಬಗ್ಗೆ ಸಂಪಂಗಿರಾಮನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಷ್ಮಾರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.