Monday, January 20, 2025
ಸುದ್ದಿ

ನಕ್ಸಲ್‌ವಾದವನ್ನು ಉತ್ತೇಜಿಸುವವರ ವಿರುದ್ಧ ಸೈದ್ಧಾಂತಿಕ ಹೋರಾಟದಲ್ಲಿ ಜಯಗಳಿಸುವುದು ಆವಶ್ಯಕ ! – ವಕೀಲೆ ರಚನಾ ನಾಯ್ಡು – ಕಹಳೆ ನ್ಯೂಸ್

ನಕ್ಸಲ್‌ವಾದವು ದೇಶದ ಆಂತರಿಕ ಭದ್ರತೆಗೆ ಬಹುದೊಡ್ಡ ಅಪಾಯವಾಗಿದೆ. ಭಾರತೀಯ ಸೇನೆಯು ಕಷ್ಟಕರವಾದ ಭೌಗೋಳಿಕ ಪರಿಸ್ಥಿತಿಯಲ್ಲಿ ಬಂದೂಕುಧಾರಿ ನಕ್ಸಲೀಯರ ವಿರುದ್ಧ ಸಮರ್ಥವಾಗಿ ಹೋರಾಡುತ್ತಲೇ ಇದೆ; ಆದರೆ ಈ ಹೋರಾಟ ಮಾಡುವಾಗ ಭಾರತೀಯ ಸೇನೆಯ ವಿರುದ್ಧ ‘ಗ್ರಾಮಸ್ಥರ ಹತ್ಯೆ’, ‘ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು’, ‘ಮಾನವ ಹಕ್ಕುಗಳ ಉಲ್ಲಂಘನೆ’ ಎಂದು ಅಪಪ್ರಚಾರ ಮಾಡಿದಾಗ ಮಾತ್ರ ಸೈದ್ಧಾಂತಿಕ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆ. ಶಸ್ತ್ರಸಜ್ಜಿತ ನಕ್ಸಲೀಯರು ಕೇವಲ ಶೇ. 25 ರಷ್ಟಿದ್ದು ಉಳಿದ ಶೇ. 75 ರಷ್ಟು ಮಾನವಶಕ್ತಿಯು ವಿವಿಧ ಮಾರ್ಗಗಳ ಮೂಲಕ ಈ ನಕ್ಸಲ್‌ವಾದವನ್ನು ಮುಂದುವರೆಸುವಲ್ಲಿ ಕಾರ್ಯನಿರತವಾಗಿದೆ. ನಕ್ಸಲ್‌ವಾದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡುವ ಲೇಖಕರು, ಪತ್ರಕರ್ತರು, ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರ ವಿರುದ್ಧ ಸೈದ್ಧಾಂತಿಕ ಹೋರಾಟವನ್ನು ಗೆಲ್ಲುವುದು ಅಗತ್ಯವಾಗಿದೆ, ಎಂದು ಛತ್ತೀಸಗಡದ ದುರ್ಗದಲ್ಲಿನ ವಕೀಲೆ ರಚನಾ ನಾಯ್ಡು ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಸ್ವಾತಂತ್ರ್ಯದ 75 ವರ್ಷಗಳು – ನಕ್ಸಲ್‌ವಾದವು ಇದುವರೆಗೂ ಏಕೆ ಕೊನೆಗೊಂಡಿಲ್ಲ ?’ ಎಂಬ ವಿಷಯದ ಕುರಿತು ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ವಕೀಲೆ ರಚನಾ ನಾಯ್ಡು ತಮ್ಮ ಮಾತನ್ನು ಮುಂದುವರೆಸುತ್ತಾ, ನಕ್ಸಲ್‌ವಾದಿಗಳನ್ನು ವಿರೋಧಿಸಿದ ಜನಸಾಮಾನ್ಯರಿಂದ ಹಿಡಿದು ರಾಜಕೀಯ ಮುಖಂಡರು ಮತ್ತು ವಿವಿಧ ಕ್ಷೇತ್ರದ ಜನರೆಲ್ಲರನ್ನು ನಕ್ಸಲೀಯರು ಹುಡುಕಿ ಕೊಂದಿದ್ದಾರೆ. ನಕ್ಸಲೀಯರು ತಾವು ಯಾವ ಜನರಿಗಾಗಿ ಹೋರಾಡುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆಯೋ ಅವರನ್ನೇ ಕೊಲ್ಲಲಾಗುತ್ತಿದೆ, ಇದು ಯಾವ ರೀತಿಯ ಕ್ರಾಂತಿಯಾಗಿದೆ ? ಶರಣಾದ ನಕ್ಸಲಿಯರ ಪೈಕಿ ಯಾರೂ ಸಹ ತಮ್ಮ ಸಿದ್ಧಾಂತದೊಂದಿಗೆ ಜೋಡಿಸಲ್ಪಟ್ಟಿಲ್ಲ ಎಂದು ಅವರೊಂದಿಗೆ ಮಾತನಾಡುವಾಗ ತಿಳಿಯುತ್ತದೆ. ನಕ್ಸಲೀಯರು ತಮ್ಮ ಪ್ರಭಾವದ ಪ್ರದೇಶಗಳಲ್ಲಿ ಅನೇಕ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ್ದಾರೆ; ಆದರೆ ಅವರು ಚರ್ಚ್ ಅಥವಾ ಇತರ ಪ್ರಾರ್ಥನಾ ಸ್ಥಳಗಳಿಗೆ ಹಾನಿ ಮಾಡಿರುವುದು ಕೇಳಿಬಂದಿಲ್ಲ ಎಂದು ಹೇಳಿದರು.
ಛತ್ತೀಸಗಡದ ಅತ್ಯಂತ ದುರ್ಗಮ ಪ್ರದೇಶಗಳಲ್ಲಿರುವ ನಕ್ಸಲೀಯರು ಯಾವ ರಾಜ್ಯದ ರಾಜಧಾನಿಯ ತನಕ ತಲುಪಲು ಆಗಿಲ್ಲವೋ ಅವರು ‘ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್’ಅನ್ನು ಬಹಿರಂಗವಾಗಿ ಬೆಂಬಲಿಸುವುದು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಮತ್ತು ಬೆಂಗಳೂರಿನಲ್ಲಿ ಗೌರಿ ಲಂಕೇಶ ಹತ್ಯೆಯ ನಂತರ ಮಾತ್ರ ಬೀದಿಗಿಳಿದಿದ್ದು ಕಂಡುಬಂದಿತ್ತು. ಛತ್ತೀಸಗಡ ರಾಜ್ಯವು ಪೌರಾಣಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದ್ದರೂ ಅದನ್ನು ‘ನಕ್ಸಲೀಯರ ರಾಜ್ಯ’ ಎಂದು ಅಪಪ್ರಚಾರ ಮಾಡಲಾಗುತ್ತಿದೆ, ಇದನ್ನು ತಡೆಗಟ್ಟಬೇಕು, ಎಂದು ವಕೀಲೆ ನಾಯ್ಡು ಕೊನೆಗೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು