Monday, January 20, 2025
ಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಷಾ ಸಂಘದ ವತಿಯಿಂದ ‘‘ಆಟಿದ ಗೊಬ್ಬು” ವಿಶೇಷ ತರಬೇತಿ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಷಾ ಸಂಘದ ವತಿಯಿಂದ ತುಳು ತಿಂಗಳಿನ ಆಟಿಯಲ್ಲಿ ಆಡುವ ಆಟ ‘‘ಆಟಿದ ಗೊಬ್ಬು” ಎನ್ನುವ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀರಾಮ ಶಾಲೆಯ ಅಧ್ಯಾಪಕರಾದ ಸುಮಂತ್ ಆಳ್ವ ಎಂ. ಆಟಿ ತಿಂಗಳ ಒಳಾಂಗಣ ಆಟವಾದ ಚೆನ್ನೆಮಣೆಯ ಮಹತ್ವ ತಿಳಿಸುತ್ತಾ, “ಆಧುನಿಕ ಕಾಲಗಟ್ಟದಲ್ಲಿ ವಿದ್ಯಾರ್ಥಿಗಳು ಸ್ಮಾರ್ಟ್ ಫೋನಿನ ಆಟದತ್ತ ವಾಲುತ್ತಿದ್ದು, ಸಾಂಪ್ರದಾಯಿಕ ಆಟಗಳು ನೇಪಥ್ಯಕ್ಕೆ ಸರಿಯುತ್ತಿದೆ. ಇಂತಹ ತುಳುನಾಡಿನ ಆಟವನ್ನು ಎಲ್ಲರಿಗೂ ಪರಿಚಯಿಸುವುದರೊಂದಿಗೆ ಮುಂದಿನ ಜನಾಂಗಕ್ಕೆ ವರ್ಗಾಯಿಸಿ ತುಳುನಾಡಿನ ಸಂಸ್ಕøತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ತುಳುವರ ಬದುಕಿನ ಆಯಾಮಗಳು ಹೊರಗಡೆ ಬೀಳುತ್ತಿದ್ದದ್ದೇ ಆಟಿ ತಿಂಗಳಿನಲ್ಲಿ ಅಂದಿನ ಕಾಲದಲ್ಲಿ ಮನೆಯೊಳಗಡೆ ಕುಳಿತು ಇಂತಹ ಆಟಗಳನ್ನು ಆಡುತ್ತಾ ಒಟ್ಟಾಗಿ ನಡೆಸುವ ಚರ್ಚೆಗಳು ಮುಂದಿನ ಬದುಕಿಗೆ ಪೂರಕವಾಗುತ್ತಿತ್ತು. ಚೆನ್ನೆಮಣೆ ಕೇವಲ ಆಟ ಮಾತ್ರವಲ್ಲದೆ ಅದರಲ್ಲಿರುವ ಸಾಮಾಜಿಕ ಸಂಬಂಧಗಳ ಸಂಗತಿಗಳೂ ಕೂಡ ಪಾಡ್ದನಗಳ ಮೂಲಕ ತಿಳಿದು ಬರುತ್ತದೆ. ಸಹೋದರಿಯರು ಮತ್ತು ದಂಪತಿಗಳು ಆಡವಾಡುವುದು ನಿಷಿದ್ಧ ಏಕೆ ಎಂದು ತಿಳಿಸುವ ತುಳುನಾಡಿನ ಇತಿಹಾಸದಲ್ಲಿ ಉಲ್ಲೇಖಿತ ಕಥೆಯನ್ನು ಹೇಳಿದರು.
ಇದರೊಂದಿಗೆ ಆಟಿ ತಿಂಗಳ ವಿಶೇಷವಾದ ತುಳು ಎದರುಕತೆ (ಒಗಟು), ಗಾದೆ ಮತ್ತು ಕಬಿತೆ (ಕವಿತೆ) ಹೇಳಿಕೊಟ್ಟರು. ತರಬೇತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಭಾರತಮಾತೆಗೆ ಪುಷ್ಪಾರ್ಚಣೆ ಮಾಡಿ ಆರಂಭಿಸಲಾಯಿತು.
ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಮತ್ತು ಹಿರಿಯ ಅಧ್ಯಾಪಕರಾದ ದೇವಿಕಾ ಪಿ ರವರು ಚೆನ್ನೆಮಣೆ, ಚೆನ್ನೆಕಾಯಿ ಬಳಸಿ ಆಡುವ ವಿಧಾನಗಳ ಬಗ್ಗೆ ತಿಳಿಸಿಕೊಟ್ಟರು. ಅನ್ನಪೂರ್ಣ ಎನ್ ಭಟ್ ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಚೆನ್ನೆಮಣೆ ಆಟವನ್ನು ಕಲಿಸಿಕೊಡಲಾಯಿತು. ವೇದಿಕೆಯಲ್ಲಿ ಊರಿನ ಹಿರಿಯರು ಹಾಗೂ ಚೆನ್ನೆಮಣೆ ಆಟ ಪ್ರವೀಣೆ ಜಯಂತಿ ಕುರ್ಮಾನ್, ಬೇಬಿ ಕುರ್ಮಾನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ರಮ್ಯ ಜೆ ನಿರ್ವಹಿಸಿದರು.