Recent Posts

Monday, January 20, 2025
ಕ್ರೈಮ್ರಾಜ್ಯಸುದ್ದಿ

ಕೋಲಾರದಲ್ಲಿ ಗಲಾಟೆ ಬಿಡಿಸಲು ಹೋದ RSS ಮುಖಂಡ ರವಿಗೆ ಚಾಕು ಇರಿತ ; ಮಾಲೂರು ಪೊಲೀಸ್ ಠಾಣೆಯ ಮುಂಭಾಗ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾವಣೆ – ಉದ್ವಗ್ನ ಸ್ಥಿತಿ ನಿರ್ಮಾಣ – ಕಹಳೆ ನ್ಯೂಸ್

ಒಬ್ಬ ಆರೋಪಿ ಸೈಯದ್ ವಸೀಂನನ್ನು ಸೆರೆ 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಲಾರ, (ಆಗಸ್ಟ್.06): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ಬೆಳ್ಳಾರೆ ಹತ್ಯೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಕೋಲಾರದಲ್ಲಿ ಆರ್‌ಎಸ್‌ಎಸ್‌ ಮುಖಂಡನಿಗೆ ಚಾಕುವಿನಿಂದ ತಿವಿದಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ವೆಂಕಟೇಶ್ವರ ದೇವಾಲಯದ ಈ ಘಟನೆ ನಡೆದಿದ್ದು,  ಇಂದು(ಶನಿವಾರ) ಮಧ್ಯಾಹ್ನ ಅಂಗಡಿ ಮುಂದೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ‌ ನಡೆದಿದೆ. ಗಲಾಟೆ ಬಿಡಿಸಲು ಹೋದ ಎಬಿವಿಪಿ ಅಧ್ಯಕ್ಷ. ರವಿ ಎನ್ನುವರಿಗೆ ಅನ್ಯ ಕೋಮಿನ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದಾರೆ. ಸಧ್ಯ ಗಾಯಗೊಂಡಿರುವ ರವಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ಸಂಭಸುತ್ತಿದ್ದಂತೆ ಆರ್‌ಎಸ್‌ಎಸ್‌ ಮುಖಂಡರು ಮಾಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಇನ್ನು ಮಾಲೂರು ಪೊಲೀಸ್ ಠಾಣೆಯ ಮುಂಭಾಗ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಉದ್ವಗ್ನ ಸ್ಥಿತಿ ನಿರ್ಮಾಣವಾಗಿದೆ.

 ರವಿ ಮಾಲೀಕತ್ವದ ಸ್ಟೀಲ್ ಅಂಗಡಿಯ ಮುಂಭಾಗ ಇಬ್ಬರು ಗಲಾಟೆ ಮಾಡುತ್ತಿದ್ದರು. ಈ ವೇಳೆ ಗಲಾಟೆಯನ್ನು ಬಿಡಿಸಿ ಅಂಗಡಿಗೆ ವಾಪಸ್ಸಾಗುವಾಗ ಇಬ್ಬರು ಅನ್ಯ ಕೋಮಿನ ಯುವಕರು ರವಿಗೆ ಚಾಕುವಿನಿಂದ ತಿವಿದಿದ್ದಾರೆ. ಅನ್ಯ ಕೋಮಿನ ಯುವಕರಿಬ್ಬರು ಚಾಕುವಿನಿಂದ ಇರಿದಿದ್ದಾರೆ. ಒಬ್ಬ ಆರೋಪಿ ಸೈಯದ್ ವಸೀಂನನ್ನು ಸೆರೆ ಹಿಡಿಯಲಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಹಲ್ಲೆ ನಡೆದ ಆರೋಪಿಗಳು ಓರ್ವ ಆಟೋ ಚಾಲಕನಾಗಿದ್ದರೆ, ಮತ್ತೋರ್ವ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈಗ ಬಂದ ಮಾಹಿತಿ ಪ್ರಕಾರ ಓರ್ವ ಆರೋಪಿಯನ್ನು  ಮಾಲೂರು ಪೊಲೀಸರು ಬಂಧಿಸಿದ್ದು, ಎಸ್ಕೇಪ್ ಆಗಿರುವ ಮತ್ತೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.