Sunday, November 24, 2024
ಸುದ್ದಿ

ಅಗಸ್ಟ್ ೭ರಂದು ರಿಲೀಸ್ ಆಗಲಿದೆ ‘ಕೃಷ್ಣ ಎನಬಾರದೆ’ ಹಾಡು : ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣನ ಭಕ್ತರ ಮುಂದಿಡಲು ಸಜ್ಜಾಗಿದ್ದಾರೆ ತುಳುನಾಡ ಗಾನಗಂಧರ್ವ ಬಿರುದಾಂಕಿತ ಜಗದೀಶ್ ಆಚಾರ್ಯ ಪುತ್ತೂರು – ಕಹಳೆ ನ್ಯೂಸ್

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಗಾನಗಂಧರ್ವ ಬಿರುದಾಂಕಿತ ಜಗದೀಶ್ ಆಚಾರ್ಯ ಪುತ್ತೂರು ಅವರು ‘ಕೃಷ್ಣ ಎನಬಾರದೆ’ ಎಂಬ ಅಧ್ಬುತ ಹಾಡಿನ್ನ ಶ್ರೀ ಕೃಷ್ಣನ ಭಕ್ತರ ಮುಂದಿಡಲು ಸಜ್ಜಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ .ರಿ ಅರ್ಪಿಸುವ ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ಎಂಬ ಪುರಂದರ ದಾಸರ ಕಿರ್ತನೆಗೆ ಪುತ್ತೂರು ಜಗದೀಶ್ ಆಚಾರ್ಯ ಸಂಗೀತ ನಿರ್ದೇಶನ ಮತ್ತು ಗಾಯನದ ಮೂಲಕ ಈ ಹಾಡು ಹೊರಹೊಮ್ಮಿದ್ದು, ಆಗಸ್ಟ್ ೭ ರಂದು ಬಿಡುಗಡೆಗೊಳ್ಳಲಿದೆ. ಇನ್ನು ಈ ಹಾಡಿನಲ್ಲಿ ಪುತ್ತೂರಿನ ಹೆಸರಾಂತ ಗಾಯಕಿಯರಾದ ಸಮನ್ವಿ ರೈ, ಜನ್ಯ ಪ್ರಸಾದ್, ದಿವ್ಯ ನಿಧಿ ರೈ, ಸಾಹಿತ್ಯ ಆಚಾರ್ಯ ಸಹ ಗಾಯಕಿಯರಾಗಿ ತಮ್ಮ ಅಧ್ಬುತ ಕಂಠದ ಮೂಲಕ ಹಾಡಿಗೆ ವಿಶೇಷ ಮೆರುಗು ತುಂಬಿದ್ದಾರೆ.
ಈ ಹಾಡಿಗೆ ಅರುಣ್ ರೈ ಪುತ್ತೂರು, ನಾಗೇಶ್ ಟಿ.ಎಸ್ ಕೆಮ್ಮಯಿ, ದೀರಜ್ ಭಟ್ ಇವರ ವಿಡಿಯೋ, ಚರಣ್ ಆಚಾರ್ಯ ಪುತ್ತೂರು ಇವರ ಸಂಕಲನ, ಹಾಗೂ ವೈಟಿ ಶಿಶಿರ್ ರೈ ಚೆಲ್ಯಡ್ಕ ಮಾಡಿದ್ದಾರೆ. ಇನ್ನು ಈ ಹಾಡಿನ ನಿರ್ಮಾಣವನ್ನ ಬೆಹರೈನ್‌ನ ಮವಜಿ ಹೌಸ್‌ನ, ಶ್ರೀ ನವೀನ್ ಮವಜಿ, ಕಾವ್ಯಶ್ರೀ ನವೀನ್, ಬೇಬಿ ಸಾನ್ವಿ ಮವಜಿ ಇವರು ಮಾಡಿದ್ದಾರೆ.
ಕೃಷ್ಣ ಜನ್ಮಾಷ್ಟಮಿಯ ದಿನzಪ್ರಯುಕ್ತ ತುಳುನಾಡ ಗಾನಗಂಧರ್ವ ಬಿರುದಾಂಕಿತ ಜಗದೀಶ್ ಆಚಾರ್ಯ ಪುತ್ತೂರು ಅವರು
‘ಕೃಷ್ಣ ಎನಬಾರದೆ’ ಹಾಡು ಕೃಷ್ಣ ಭಕ್ತರ ಮನ ಗೆಲ್ಲಲಿದ್ದು, ಬಹು ನಿರೀಕ್ಷಿತ ಹಾಡು ನಾಳೆ ಜನರ ಮುಂದೆ ತೆರೆದುಕೊಳ್ಳಲಿದೆ.