Recent Posts

Sunday, January 19, 2025
ಸುದ್ದಿ

ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ “ಕೃಷಿಯತ್ತ ವಿದ್ಯಾರ್ಥಿಗಳ ಚಿತ್ತ ಕಾರ್ಯಕ್ರಮ – ಕಹಳೆ ನ್ಯೂಸ್

ನಮ್ಮ ದೇಶಾದ್ಯಂತ ಆಜ್ಹಾದಿ ಕಾ ಅಮೃತ್ ಮಹೋತ್ಸವ್‌ಆಚರಣೆ ನಡೆಯುತ್ತಿರುವ ಈ ವಿಶೇಷ ಸಂದರ್ಭದಲ್ಲಿ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ವಿವೇಕಾನಂದ ಸ್ಕೌಟ್ಸ್ ಮತ್ತು ನಿವೇದಿತಾಗೈಡ್ಸ್ ದಳದ ಸದಸ್ಯರು, ಕೊಡಂಗೆತರವಾಡು ಶ್ರೀ ಜಯರಾಮ ನಾಯ್ಕ್ ಇವರ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ “ನಮ್ಮ ಚಿತ್ತ ಕೃಷಿಯತ್ತ” ಎಂಬ ಮಾತಿನೆಡೆಗೆ ಹೆಜ್ಜೆ ಇರಿಸಿದರು. ಶಿಕ್ಷಕ ಶಿಕ್ಷಕೇತರ ವೃಂದದವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾರಂಭದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈಯವರು ದೀಪ ಬೆಳಗಿಸಿ ನಾಟಿಗೆ ಚಾಲನೆ ನೀಡಿ, ಕೃಷಿ ಪ್ರಧಾನವಾದ ನಮ್ಮದೇಶದಲ್ಲಿ ಈಗೀಗ ಕೃಷಿಯ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಆಸಕ್ತಿ ಮೂಡಿಸಿಕೊಳ್ಳುತ್ತಿರುವುದು ಸಂತಸದ ವಿಷಯ ಎಂದರು. ಕೊಡಂಗೆ ಕುಟುಂಬದ ಹಿರಿಯರಾದ ಶ್ರೀ ಜಯರಾಮ ನಾೈಕ್‌ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿವೇಕಾನಂದ ಸ್ಕೌಟ್ಸ್ ಮತ್ತು ನಿವೇದಿತಾಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ ಈ ಕಾರ್ಯದಲ್ಲಿ ಸ್ಥಳೀಯರ ಜೊತೆಗೆ ಶ್ರೀ ರೂಪೇಶ್, ಶ್ರೀಮತಿ ಜ್ಯೋತಿರೂಪೇಶ್, ಕುಮಾರಿ ಸಾನ್ವಿಇವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರಿಗೆ ಪಾನೀಯ ಮತ್ತುಉಪಾಹಾರದ ವ್ಯವಸ್ಥೆ ಮಾಡಿ ಸಹಕರಿಸಿದರು.