Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ಜಗದೀಶ್ ಆಚಾರ್ಯ ನಿರ್ದೇಶನ ಗಾಯನದ ‘ಕೃಷ್ಣಾ ಎನಬಾರದೆ’ ಪುರಂದರ ದಾಸರ ಕೀರ್ತನೆ ಬಿಡುಗಡೆಗೊಳಿಸಿದ ಕಶೆಕೋಡಿ ಸೂರ್ಯನಾರಾಯಣ ಭಟ್ – ಕಹಳೆ ನ್ಯೂಸ್

ಪುತ್ತೂರು: ತುಳುನಾಡ ಗಾನ ಗಂಧರ್ವ ಪುತ್ತೂರು ಜಗದೀಶ್ ಆಚಾರ್ಯ ರ ಮತ್ತೊಂದು ದಾಸರ ಪದವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸುಸಂದರ್ಭದಲ್ಲಿ ಸ್ವತಃ ಜಗದೀಶ್ ಸಂಗೀತ ಹಾಗೂ ನಿರ್ದೇಶನ ಹಾಗೂ ಗಾಯನದಲ್ಲಿ ಮೂಡಿ ಬಂದ ಪುರಂದರ ದಾಸರ ಸಾಹಿತ್ಯಕ್ಕೆ ವಿಶೇಷವಾದ ರಾಗ ಸಂಯೋಜನೆಯಲ್ಲಿ ಈ ವಿಡಿಯೋ ಭಕ್ತಿಗೀತೆ ಜಗದೀಶ್ ಪುತ್ತೂರು ಯುಟ್ಯೂಬ್ ಚಾನಲ್ ನಲ್ಲಿ ಹೊರ ತಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ದಿಂದ ವತಿಯಿಂದ ನವೀನ್ ಮಾವಜಿ ಕಾವ್ಯ ನವೀನ್ ಬೇಬಿ ಸಾನ್ವಿ ಮಾವಜಿ ರವರ ನಿರ್ಮಾಣದಲ್ಲಿ ಮೂಡಿ ಬಂದ ಭಕ್ತಿಗೀತೆಯನ್ನು ಜಗದೀಶ್ ಪುತ್ತೂರು ಗಾಯನದೊಂದಿಗೆ ಹಾಗೂ ತುಳು ನಾಡಿನ ಹೆಮ್ಮೆಯ ಗಾಯಕಿ ಪಲ್ಲವಿ ಪ್ರಭು . ಸಮನ್ವಿ ರೈ. ಜನ್ಯ ಪ್ರಸಾದ್. ದಿವ್ಯಾ ನಿಧಿ ರೈ..ಹಾಗೂ ಸಾಹಿತ್ಯ ಆಚಾರ್ಯ ರ ಕಂಠ ಸಿರಿಯಲ್ಲಿ ಹಾಡು ಬಿಡುಗಡೆ ಗೊಂಡಿದೆ.

ಈ ಹಾಡನ್ನು ಕರ್ನಾಟಕ ಸರಕಾರದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಶ್ರಿಯುತ ಕಶೆಕೋಡಿ ಸೂರ್ಯನಾರಾಯಣ ಭಟ್ ಹಾಡು ಬಿಡುಗಡೆಗೊಳಿಸಿದರು‌. ಈ ಸಂದರ್ಭದಲ್ಲಿ ಪತ್ರಕರ್ತ, ಸಂಪಾದಕ ಶ್ಯಾಮಸುದರ್ಶನ್ ಹೊಸಮೂಲೆ ಮತ್ತಿತರರು ಉಪಸ್ಥಿತರಿದ್ದರು.