Recent Posts

Monday, January 20, 2025
ಸಿನಿಮಾಸುದ್ದಿ

‘ಸ್ಮೋಕ್ ಮಾಡುವುದಿಲ್ಲವಾ? ನಾನು ಸ್ಮೋಕ್​ ಮಾಡ್ತೀನಿ, ಅದ್ರಲ್ಲಿ ತಪ್ಪೇನಿದೆ? ‘ ಎಂದ ಸೋನು ಗೌಡ ; ‘ನಾನು ಸ್ಮೋಕ್ ಮಾಡಲ್ಲ’ ಎಂದ ರೂಪೇಶ್​ ಶೆಟ್ಟಿಗೆ ಆಶ್ಚರ್ಯ – ಕಹಳೆ ನ್ಯೂಸ್

‘ಬಿಗ್ ಬಾಸ್​ ಒಟಿಟಿ’ಯಲ್ಲಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಸೋನು ಗೌಡ. ಅವರು ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿದ್ದಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಸಾಕಷ್ಟು ಹಿಂಬಾಲಕರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಟಿಕ್​ ಟಾಕ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ (Social Media) ಖ್ಯಾತಿ ಪಡೆದ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ‘ಬಿಗ್​ ಬಾಸ್​ ಒಟಿಟಿ ಕನ್ನಡ ಸೀಸನ್​ 1’ಕ್ಕೆ ಎಂಟ್ರಿ ನೀಡಿದ್ದಾರೆ.

ಅವರ ಎಂಟ್ರಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವರು ಅವರ ಎಂಟ್ರಿ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅವರು ಮೊದಲ ವಾರವೇ ಹೊರ ಬೀಳಲಿದ್ದಾರೆ ಎನ್ನುವ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ಈಗ ಅವರು ನೇರ ಮಾತಿನಿಂದ​ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ.

‘ಬಿಗ್ ಬಾಸ್​ ಒಟಿಟಿ’ಯಲ್ಲಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಸೋನು ಗೌಡ. ಅವರು ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿದ್ದಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಸಾಕಷ್ಟು ಹಿಂಬಾಲಕರಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಮೂಲಕ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದಾರೆ. ಸೋನು ಅವರ ಕೆಲ ಖಾಸಗಿ ಫೋಟೋಗಳು ಈ ಮೊದಲು ಲೀಕ್ ಆಗಿದ್ದವು. ಆ ಫೋಟೋಗಳು ತಮ್ಮದಲ್ಲ ಎಂದೇ ಅವರು ಹೇಳಿದ್ದರು. ಈಗ ಅವರು ಮನೆಯಲ್ಲಿ ನೇರ ಮಾತಿನ ಮೂಲಕ ಗಮನ ಸೆಳೆಯುತ್ತಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಸ್ಮೋಕ್ ಮಾಡುವ ವಿಚಾರ ಬಂತು. ನಟ ರೂಪೇಶ್​ ಶೆಟ್ಟಿ​ ಅವರು ‘ನಾನು ಸ್ಮೋಕ್ ಮಾಡಲ್ಲ’ ಎಂದರು. ಇದಕ್ಕೆ ಸೋನು ಗೌಡ ಅವರು, ‘ಸ್ಮೋಕ್ ಮಾಡುವುದಿಲ್ಲವಾ? ನಾನು ಮಾಡ್ತೀನಿ’ ಎಂದರು. ‘ಸಿಗರೇಟ್ ಸೇದುತ್ತೀರಾ’ ಎಂದು ಆಶ್ಚರ್ಯ ರೀತಿಯಲ್ಲಿ ಕೇಳಿದರು ರೂಪೇಶ್​ ಶೆಟ್ಟಿ. ‘ನಾನು ಸಿಗರೇಟ್ ಸೇದುತ್ತೇನೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಾರಿ ‘ಬಿಗ್ ಬಾಸ್​’ ಅನ್ನು ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದು. ವೂಟ್ ಆಯಪ್​​ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಇಲ್ಲವಾದರೆ, ನೀವು ‘ಬಿಗ್ ಬಾಸ್’ ನೋಡಲು ಆಗುವುದಿಲ್ಲ. ದಿನದ 24 ಗಂಟೆ ವೂಟ್ ಆಯಪ್​ನಲ್ಲಿ ಲೈವ್ ವೀಕ್ಷಿಸಬಹುದು. ಇದರ ಜತೆಗೆ ನಿತ್ಯ ಏನೆಲ್ಲ ಆಯಿತು ಎಂಬುದನ್ನು ಒಂದು ಅಥವಾ ಒಂದೂವರೆ ಗಂಟೆ ಸಂಚಿಕೆ ಮೂಲಕ ಪ್ರೇಕ್ಷಕರ ಎದುರು ಇಡಲಾಗುತ್ತದೆ. ಈ ಸಂಚಿಕೆ ಪ್ರಸಾರದ ಸಮಯ ಇನ್ನಷ್ಟೇ ನಿಗದಿ ಆಗಬೇಕಿದೆ.