Recent Posts

Monday, January 20, 2025
ಸಿನಿಮಾಸುದ್ದಿ

ಸೋನುಗೌಡ ಖಾಸಗಿ ವಿಡಿಯೋ ವೈರಲ್ ಸತ್ಯ ರಿವಿಲ್ ; ಬಿಗ್ ಬಾಸ್ ಮನೆಯಲ್ಲಿ ವಿಡಿಯೋ ಸತ್ಯ ಬಿಚ್ಚಿಟ್ಟ ಸೋನು ಗೌಡ ” ಹೌದು ಆ ವಿಡಿಯೋ…….. ” !!?? – ಕಹಳೆ ನ್ಯೂಸ್

ಕಿರುತರೆಯ ಜನಪ್ರಿಯ ಕಾರ್ಯಕ್ರಮವಾಗಿ ಗುರುತಿಸಿಕೊಟಡಿದ್ದ ಬಿಗ್ ಬಾಸ್ ಈ ಬಾರಿ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ. ಅದರಂತೆ ಕಿರುತರೆಯ ಬದಲಾಗಿ ಈ ಬಾರಿ ಆನ್ಲೈನ್ ಮೂಲಕ ಪ್ರಸಾರ ಮಾಡಲು ಮುಂದಾಗಿದೆ. ಓಟಿಟಿ ವೇದಿಕೆಯಾಗಿರುವ ವೂಟ್ ನಲ್ಲಿ ಈ ಸಾರಿಯ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಇದರ ಭಾಗವಾಗಿ ನಿನ್ನೆ ಹೊತ್ತಿಗೆ ಸ್ಪರ್ಧಿಗಳ ಹೆಸರನ್ನು ಕಾರ್ಯಕ್ರಮವನ್ನು ನಡೆಸಿಕೊಡುವರೂ ಆಗಿರುವ ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ್ದರು.ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತಿದ್ದಂತೆ ಇದರ ಬಗ್ಗೆ ಸಾಕಷ್ಟು ಚರ್ಚೆ ಹಾಗೂ ಆಶ್ಚರ್ಯ ಸಹ ಉಂಟು ಮಾಡಿತ್ತು. ಅಲ್ಲದೇ ಕಾರ್ಯಕ್ರಮದ ವಿರುದ್ಧ ಕೆಲವರು ಆಕ್ರೋಶ ಸಹ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆಲ್ಲ ಕಾರಣ ಎಂದರೆ ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಡ ಮನೆ ಸೇರಿದ ಸೋನು ಗೌಡ. ಹೌದು ಸೋನು ಗೌಡರ ಆಯ್ಕೆ ಸಾಕಷ್ಟು ಸಂಚಲನ ಉಂಟು ಮಾಡಿತ್ತುಏಕೆಂದರೆ ಈ ಹಿಂದೆ ರೀಲ್ಸ್’ಗಳ ಜನಪ್ರಿಯತೆ ಪಡೆದು ಸೋಷಿಯಲ್ ಮಿಡಿಯಾ ಬೆಡಗಿ ಎಂದೇ ಜನರಿಂದ ಕರೆಯಿಸಿಕೊಂಡಿದ್ದರು. ಜೊತೆಗೆ ಸಾಕಷ್ಟು ಜನ ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದರು.

ಆದರೆ ಕೆಲವೇ ದಿನಗಳಲ್ಲಿ ಚಿತ್ರಣ ಸಂಪೂರ್ಣ ಬದಲಾಗಿತ್ತು. ಕಾರಣ ಸೋನು ಗೌಡರ ಹಸಿಬಿಸಿ ದೃಶ್ಯಗಳನ್ನೊಳಗೊಂಡ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದು ಜನರಿಂದ ತೀವ್ರವಾಗಿ ಟೀಕೆಗೆ ಒಳಗಾಗಿದ್ದರೆ ಅದರ ಜೊತೆಗೆ ಟ್ರೋಲ್ ಪೇಜ್’ಗಳಿಗೆ ಆಹಾರವೂ ಆಗುವ ಜೊತೆಗೆ ಪಡ್ಡೆ ಹುಡುಗರಿಂದ ತರ ತರಹದ ಕಮೆಂಟ್ಸ್’ಗಳಿಗೂ ಒಳಪಟ್ಟಿತ್ತು.

Sonu Srinivas Gowda

ಇಂತಹ ಸೋನುಗೌಡ ಬಿಗ್ ಬಾಸ್ ಗೆ ಆಯ್ಕೆ ಆದದ್ದು ಕಂಡು ಸಾಕಷ್ಟು ಜನ ವಿರೋಧ ಹಾಗೂ ಕಾರ್ಯಕ್ರಮದ ಬಗ್ಗೆ ಟೀಕೆ ಹಾಗೂ ಟ್ರೋಲ್ ಮಾಡುವ ಕೆಲಸವನ್ನು ನೆಟ್ಟಿಗರು ಮಾಡಿದ್ದಾರೆ

ಇದರ ಭಾಗವಾಗಿಯೇ ಕಿಚ್ಚ ಸುದೀಪ ಸಹ ಸೋನು ಗೌಡ ಅವರನ್ನು ಕಾರ್ಯಕ್ರಮದ ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಿ ಅವರನ್ನು ಸ್ವಾಗತ ಮಾಡುವ ಸಮಯದಲ್ಲಿ ಸೋನು ಅವರ ಖಾಸಗಿ ವಿಡಿಯೋ ವಿಚಾರ ಎತ್ತದೇ ಪರೋಕ್ಷವಾಗಿ ಸೋನು ಅವರ ಕಾಲೆಳೆದು ಕಿಚಾಯಿಸಿದ್ದರು. ಇದೂ ಸಹ ಸಾಕಷ್ಟು ವೈರಲ್ ಆಗಿದೆ.

ಈಗ ಮನೆಯೊಳಗೆ ಹೋಗಿರುವ ಸೋನುಗೌಡ ತಮ್ಮ ಖಾಸಗಿ ವಿಡಿಯೋ ಕುರಿತು ಸತ್ಯವನ್ನು ರಿವಿಲ್ ಣಾಡಿದ್ದು ಈ ಸಮಯದಲ್ಲಿ ಕಣ್ಣೀರಿಟ್ಟಿದ್ದಾರೆ. ಹೌದು ಆ ವಿಡಿಯೋ ಸೋನು ಅವರೇ ಮಾಡಿದ್ದು ನಿಜವೇ ಆದರೂ ಅದರ ಹಿಂದೆ ಇರುವ ಸತ್ಯವನ್ನು ಸೋನು ತಿಳಿಸಿದ್ದಾರೆ.

ಆ ವಿಡಿಯೋ ಕುರಿತು ಕೇಳಿದ ಪ್ರಶ್ನೆಗೆ ಕಣ್ಣೀರಿಟ್ಟು ಉತ್ತರ ನೀಡಿದ ಸೋನು ತಮ್ಮ ಬಾಯ್’ಫ್ರೆಂಡ್ ಕರೆ ಮಾಡಿ ಸಾಮಾನ್ಯವಾಗಿ ಮಾತನಾಡುತ್ತಾ ಆತನ ಬೇಡಿಕೆಯ ಮೇಲೆ ಆತನಿಗೆ ವಿಡಿಯೋ ಕರೆ ಮಾಡಿದ್ದು ಅಲ್ಲಿಂದ ಅದು ರೆಕಾರ್ಡ್ ಆಗಿ ಮುಂದೆ ಅದು ವೈರಲ್ ಆಗಿದೆ ಎನ್ನುವ ಸತ್ಯವನ್ನು ಬಹಿರಂಗ ಮಾಡಿದ್ದಾರೆ.

ಇಲ್ಲಿ ತಪ್ಪು ಯಾರದು ಎಂದು ಹೇಳುವುದು ಕಷ್ಟ. ಏಕೆಂದರೆ ಆತ ಕೇಳಿದ ಕೂಡಲೇ ಆ ತರ ವಿಡಿಯೋ ಹಿಂದೆ ಮುಂದೆ ಯೋಚನೆ ಮಾಡದೇ ಮಾಡಿದ್ಳು ಸೋನುಗೌಡರ ತಪ್ಪೋ ಇಲ್ಲ ಅದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟವರ ತಪ್ಪೋ ಗೊತ್ತಿಲ್ಲ.

ಹಾಗಿದ್ದರೂ ಹೆಣ್ಣುಮಕ್ಕಳಿಗೆ ಮಾಡುವ ನಂಬಿಕೆ ದ್ರೋಹ ಎನ್ನಬಹುದು. ಏಕೆಂದರೆ ಒಬ್ಬ ಹೆಣ್ಣು ಅಂತಹ ಕರೆ ಮಾಡುತ್ತಾಳೆ ಅಂದರೆ ಆಕೆ ಆ ವ್ಯಕ್ತಿಯನ್ನು ಬಹಳಷ್ಟು ನಂಬಿಯೇ ಈ ಹೆಜ್ಜೆ ಇಟ್ಟಿರುತ್ತಾಳೆ. ಹಾಗಿರುವಾಗ ಆಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಹಂಚಿಕೊಳ್ಳುವುದು ಎಷ್ಟು ಸರಿ? ಈ ರೀತಿ ವೈರಲ್ ಆದ ಬಳಿಕ ಆಕೆಯ ಮುಂದಿನ ಭವಿಷ್ಯ ಏನು ಎನ್ನುವುದೆಲ್ಲವನ್ನೂ ಯೋಚನೆ ಮಾಡಬೇಕು. ಹಾಗೇ ಪ್ರತಿಯೊಬ್ಬರ ಮನೆಯಲ್ಲಿಯೂ ಹೆಣ್ಣು ಮಕ್ಕಳು ಇದ್ದಾರೆ ಎನ್ನುವುದನ್ನು ಮರೆಯಬಾರದು.