Monday, January 20, 2025
ಸುದ್ದಿ

ಹೆಲ್ಮೆಟ್‍ನಲ್ಲಿ ಕ್ಯಾಮರಾ ಅಳವಡಿಸಿ ಓಡಾಡುವಂತಿಲ್ಲ.! ದ್ವಿಚಕ್ರವಾಹನ ಸವಾರರಿಗೆ ಕೇರಳ ಸಾರಿಗೆ ಇಲಾಖೆಯಿಂದ ಖಡಕ್ ಎಚ್ಚರಿಕೆ.?- ಕಹಳೆ ನ್ಯೂಸ್

ಹೆಲ್ಮೆಟ್‍ನಲ್ಲಿ ಕ್ಯಾಮರಾ ಅಳವಡಿಸಿ ದ್ವಿಚಕ್ರವಾಹನ ಸವಾರಿ ಮಾಡುವುದು ಸಾಮಾನ್ಯವಾಗಿದೆ. ಆದರೆ ಕೇರಳದ ಸಾರಿಗೆ ಇಲಾಖೆ ಹೆಲ್ಮೆಟ್‍ನಲ್ಲಿ ಕ್ಯಾಮರಾ ಅಳವಡಿಸಿ ಸಂಚರಿಸುವ ದ್ವಿಚಕ್ರವಾಹನ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮುಂದೆ ಹೆಲ್ಮೆಟ್‍ನಲ್ಲಿ ಕ್ಯಾಮರಾ ಕಂಡುಬಂದರೆ 1000 ರೂಪಾಯಿ ದಂಡ, ಮೊದಲ ಎಚ್ಚರಿಕೆ ನೀಡಿ ಬಳಿಕವೂ ಮರುಕಳಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಂಚಾರ ಆಯುಕ್ತರು ಹೇಳಿದ್ದಾರೆ. ಇದಲ್ಲದೆ ಎಚ್ಚರಿಕೆಯ ಹೊರತಾಗಿಯೂ ಅಕ್ರಮ ಮುಂದುವರಿದರೆ ಮೂರು ತಿಂಗಳವರೆಗೆ ಪರವಾನಗಿ ರದ್ದುಪಡಿಸಲು ಆಯುಕ್ತರು ಆದೇಶ ನೀಡಿದ್ದಾರೆ.
ಹೆಲ್ಮೆಟ್‍ಗೆ ಕ್ಯಾಮೆರಾ ಅಳವಡಿಸುವುದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಅವರ ಖಾಸಗಿತನಕ್ಕೆ ಅಪಾಯವಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಇದಕ್ಕೂ ಮುನ್ನ ಹೆಲ್ಮೆಟ್ ಕ್ಯಾಮೆರಾ ಬಳಸಿ ವಿಡಿಯೋ ಚಿತ್ರೀಕರಣ ಮಾಡುವುದು ಕಂಡು ಬಂದರೆ ವಾಹನ ದಾಖಲೆ ಮತ್ತು ಪರವಾನಗಿ ರದ್ದುಪಡಿಸಲಾಗುವುದು ಎಂದು ಮೋಟಾರು ವಾಹನ ಇಲಾಖೆ ತಿಳಿಸಿತ್ತು.