Tuesday, January 21, 2025
ಸುದ್ದಿ

ಕಾಮನ್‌ವೆಲ್ತ್‌ ಗೇಮ್ಸ್‌: ಭಾರತದ ಬಾಕ್ಸರ್ ʻಸಾಗರ್ ಅಹ್ಲಾವತ್ʼಗೆ ಬೆಳ್ಳಿ ಪದಕ – ಕಹಳೆ ನ್ಯೂಸ್

ಬರ್ಮಿಂಗ್‌ಹ್ಯಾಮ್: ನಿನ್ನೆ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕಗಳ ಸುರಿಮಳೆಯೇ ಸುರಿದಿದೆ. ಈ ಲಿಸ್ಟ್‌ನಲ್ಲಿ ಭಾರತದ ಬಾಕ್ಸರ್ ಸಾಗರ್ ಅಹ್ಲಾವತ್ ಗೆದ್ದ ಬೆಳ್ಳಿ ಪದಕವೂ ಕೂಡ ಸೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಗರ್ ಅಹ್ಲಾವತ್ ಅವರು ಪುರುಷರ 92kg ಫೈನಲ್ ವಿಭಾಗದಲ್ಲಿ ಇಂಗ್ಲೆಂಡ್​ನ ಡೆಲೀಶಿಯಸ್ ಓರಿಯೊ ವಿರುದ್ಧ 0-5 ಅಂತರದಿಂದ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.

ನಿನ್ನ ನಡೆದ 10 ನೇ ದಿನದ ಕ್ರೀಡಾಕೂಟದಲ್ಲಿ ಭಾರತವು ಒಟ್ಟು 14 ಪದಕಗಳನ್ನು ತಮ್ಮದಾಗಿಸಿಕೊಂಡಿದೆ. ಕಾಮನ್‌ವೆಲ್ತ್ ಗೇಮ್ಸ್‌ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಭಾರತೀಯ ಅಥ್ಲೀಟ್‌ಗಳು ಒಟ್ಟು 55 ಪದಕ(18 ಚಿನ್ನ, 15 ಬೆಳ್ಳಿ ಮತ್ತು 22 ಕಂಚು)ಗಳನ್ನು ಗೆದ್ದಿದ್ದಾರೆ.