Tuesday, January 21, 2025
ಸುದ್ದಿ

ಬಂದಾರು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ಉತ್ಸವದ ಅಮೃತ ಮಹೋತ್ಸವದ ಆಚರಣೆಯ ಬಗ್ಗೆ ನಡೆದ ಪೂರ್ವಭಾವಿ ಸಭೆ – ಕಹಳೆ ನ್ಯೂಸ್

ಬಂದಾರು: ಗ್ರಾಮ ಪಂಚಾಯತ್ ಬಂದಾರು ಸ್ವಾತಂತ್ರ್ಯ ಉತ್ಸವದ ಅಮೃತ ಮಹೋತ್ಸವ ದ ಆಚರಣೆಯ ಬಗ್ಗೆ ಪೂರ್ವಭಾವಿ ಸಭೆಯು ಬಂದಾರು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆಗಸ್ಟ್ 15 ಸ್ವಾತಂತ್ರೋತ್ಸವದ ದಿನದಂದು ಅಮೃತ ಮಹೋತ್ಸವ ಪ್ರಯುಕ್ತ ನಾಡಿನ ಕರಕುಶಲ ಕರ್ಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕರಕುಶಲ ಕರ್ಮಿಗಳ ಸೇವೆಯನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸುವುದೆಂದು ಮತ್ತು ಸ್ವಾತಂತ್ರ್ಯ ದಿನವನ್ನು ನಾಡಿನ ಉತ್ಸವವಾಗಿ ಎಲ್ಲರೂ ಒಟ್ಟುಗೂಡಿ ಆಚರಿಸುವುದೆಂದು ತೀರ್ಮಾನಿಸಲಾಯಿತು

ಸಭೆಯಲ್ಲಿ ಎತ್ತು, ಕೋಣಗಳಿಂದ ಪ್ರಸ್ತುತ ಉಳುಮೆ ಮಾಡುವವರು, ಅಕ್ಕಿ ಮುಡಿ ಕಟ್ಟುವವರು, ದೈವ ನರ್ತಕರು, ನಿವೃತ್ತ ಸೈನಿಕರು, ನಿವೃತ್ತ ಶಿಕ್ಷಕರು, ಅವಿಭಕ್ತ ಕುಟುಂಬ, ಸಂಧಿ ಪಾಡ್ದನ ಹೇಳುವವರು, ಉತ್ತಮ ಪ್ರೌಡಶಾಲೆ, ಬಂದಾರು ಎಂಬ ಹೆಸರು ಗ್ರಾಮಕ್ಕೆ ನೀಡಿದ ಮೂಲಮನೆ ಹೀಗೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸಭಾ ಅಧ್ಯಕ್ಷರಾದ ಪರಮೇಶ್ವರಿ ಕೆ, ಪಂಚಾಯತ್ ಆಡಳಿತ ಅಧಿಕಾರಿ ಮೋಹನ್ ಬಂಗೇರ, ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ ಹಾಗೂ ಸದಸ್ಯರು ಮತ್ತು ಊರಿನ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಕೋರಿದ್ದಾರೆ.