ವಿದ್ಯಾಮಾತಾ ಅಕಾಡೆಮಿಯಲ್ಲಿ ಭಾರತೀಯ ನೌಕಾಸೇನೆಗೆ ಆಯ್ಕೆಯಾದವರಿಗೆ ಸನ್ಮಾನ ಸಮಾರಂಭ ಮತ್ತು ಮಾಹಿತಿ ಕಾರ್ಯಾಗಾರ – ಕಹಳೆ ನ್ಯೂಸ್
ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ “ವಿದ್ಯಾಮಾತಾ ಅಕಾಡೆಮಿ”ಯಲ್ಲಿ ಭಾರತೀಯ ನೌಕಾ ಸೇನಾ ನೇಮಕಾತಿ ಎಸ್.ಎಸ್.ಆರ್(ಸೀನಿಯರ್ ಸೆಕೆಂಡರಿ ರಿಕ್ರೂಟ್ಸ್) ಅಡಿಯಲ್ಲಿ ಆಯ್ಕೆಯಾಗಿರುವ ಪ್ರಜ್ವಲ್, ಹೃತಿಕ್ ಎಂ, ಚರಣ್ ಬಿ. ಜೆ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಮೂರು ಜನ ಭಾರತೀಯ ನೌಕಾ ಸೇನೆಗೆ ಆಯ್ಕೆಯಾಗಿದ್ದು, ಒರಿಸ್ಸಾ ಮತ್ತು ಕಾರವಾರದಲ್ಲಿ ತರಬೇತಿಯನ್ನು ಮುಗಿಸಿ ಸದ್ಯ ಕೊಚ್ಚಿನ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಈ ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಕರಾದ ದಯಾನಂದ ರೈ ಕೋರ್ಮಂಡ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.ಅತಿಥಿಗಳಾಗಿ ಡಾ.ಸುಚೇತಾ ಶೆಟ್ಟಿ, ಹೃತಿಕ್ ರವರ ತಂದೆ ದೈಹಿಕ ಶಿಕ್ಷಕರಾದ ಮೋನಪ್ಪರವರು,ಪ್ರಜ್ವಲ್ ರವರ ತಂದೆ ನಿವೃತ್ತ ಯೋಧ ಸದ್ಯ ಸಿ.ಪಿ.ಆರ್.ಐ ಉದ್ಯೋಗಿ ಎ. ವೆಂಕಪ್ಪ ಗೌಡ, ಚರಣ್ ಬಿ.ಜೆ ರವರ ತಾಯಿ ಶ್ರೀಮತಿ ವಾರಿಜ, ಉಮೇಶ್ ರೈ ಕೈಕಾರ, ತರಬೇತುದಾರರಾದ ವೇಣುಗೋಪಾಲ್ ಭಾಗವಹಿಸಿದ್ದರು .ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ಅಗ್ನಿಪಥ್ ಮತ್ತು ಎನ್.ಡಿ.ಎ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಜೊತೆ ಪ್ರಜ್ವಲ್, ಚರಣ್ ಬಿ.ಜೆ ಮತ್ತು ಹೃತಿಕ್ ಎಂ ರವರು ತಮ್ಮ ಅನುಭವಗಳನ್ನು ಹಂಚಿಕೊಂಡು ಸಂವಾದ ನಡೆಸಿದರು.ಅಗ್ನಿಪಥ್ ಯೋಜನೆಗೆ “ವಿದ್ಯಾಮಾತಾ ಅಕಾಡೆಮಿ”ಯ ವತಿಯಿಂದ ದೈಹಿಕ ಸದೃಢತೆಗೆ ಮೈದಾನ ತರಬೇತಿಯನ್ನು ಕೊಡುತ್ತಿದ್ದು , ಗೌರವ ತರಬೇತುದಾರರಾದ ದಯಾನಂದ ರೈ ಕೋರ್ಮಂಡ ಮತ್ತು ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಕರಾದ ಮೋನಪ್ಪರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.