Tuesday, January 21, 2025
ಸುದ್ದಿ

ಶ್ರೀ ರಕ್ಷೆ ಕನ್ನಡ ಆಲ್ಬಮ್ ಸಾಂಗ್ ಪೋಸ್ಟರ್ ಬಿಡುಗಡೆ -ಕಹಳೆ ನ್ಯೂಸ್

ವಿಟ್ಲ : ಶ್ರೀರಕ್ಷೆ ಬಾಂಧವ್ಯದ ತೋಳಿನಲ್ಲಿ ಎಂಬ ಅಣ್ಣ ತಂಗಿಯ ಸಂಬಂಧವನ್ನು ಸಾರುವ ಕನ್ನಡ ಆಲ್ಬಮ್ ಸಾಂಗ್ ನ ಪೋಸ್ಟರ್ ವಿಟ್ಲ ಶ್ರಿ ಪಂಚಲಿಂಗೇಶ್ವರ ಸನ್ನಿದಿಯಲ್ಲಿ ಕೃಷ್ಣಯ್ಯ ಕೆ ಅರಮನೆ ವಿಟ್ಲ ಇವರ ಮಾರ್ಗದರ್ಶನದಲ್ಲಿ ಬಿಡುಗಡೆಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ತಿಕ್ ಕುಮಾರ್ ಇವರ ಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಾಂಗ್ ಗೆ ಅಚಲ್ ವಿಟ್ಲ ಸಾಹಿತ್ಯ ಬರೆದಿದ್ದು ರಸಿಕ ಮುರುಳ್ಯ ರವರ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಮಕ್ಕಳ ಪಾತ್ರದಲ್ಲಿ ಪ್ರಣೀತ್ ಜೋಗಿ ಮತ್ತು ದಿಶಾ ಕೆ ಎಸ್ ಅಭಿನಯಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ಯದು ವಿಟ್ಲ ಹಾಗೂ ಪ್ರಚಲಿತ ಯುಟ್ಯೂಬರ್ ಹಾಗೂ ಛಾಯಾಗ್ರಾಹಕ ಬಾತು ಕುಲಾಲ್ ಪಾಲ್ಗೊಂಡಿದ್ದರು.
ಶಿವಪ್ರಸದ್, ದೀಕ್ಷಿತ್ ವರ್ಮುಡಿ, ರಕ್ಷಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.