Monday, January 20, 2025
ಬೆಂಗಳೂರುಸಿನಿಮಾಸುದ್ದಿ

‘ನಾನು ಮುಟ್ತೀನಿ ಏನ್ ಮಾಡ್ತೀಯಾ?’; ಬಿಗ್ ಬಾಸ್​ ಮನೆಯಲ್ಲಿ ಕಿತ್ತಾಡಿಕೊಂಡ ರೂಪೇಶ್ ಶೆಟ್ಟಿ ಹಾಗೂ ರಾಕೇಶ್..!  – ಕಹಳೆ ನ್ಯೂಸ್

ಮೊದಲ ವಾರವೇ ಇಡೀ ಮನೆ ರಣರಂಗ ಆಗುವ ಸೂಚನೆ ಸಿಕ್ಕಿದೆ. ಇದರಿಂದ ಕೆಲವರು ಹೈಲೈಟ್ ಆದರೆ, ಇನ್ನೂ ಕೆಲವರು ವೀಕ್ಷಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ಬಿಗ್ ಬಾಸ್ ಒಟಿಟಿ’ (Bigg Boss OTT) ಆರಂಭವಾಗಿ ಕೆಲವೇ ದಿನಗಳು ಕಳೆದಿವೆ.

ಆಗಲೇ ಮನೆಯಲ್ಲಿ ಕಿತ್ತಾಟಗಳ ಸರಣಿ ಆರಂಭ ಆಗಿದೆ. ಹೈಲೈಟ್ ಆಗಲು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸ್ಪರ್ಧಿಗಳ ಮಧ್ಯೆ ಜಗಳ ಆರಂಭ ಆಗಿದೆ. ಮೊದಲ ವಾರವೇ ಇಡೀ ಮನೆ ರಣರಂಗ ಆಗುವ ಸೂಚನೆ ಸಿಕ್ಕಿದೆ. ಇದರಿಂದ ಕೆಲವರು ಹೈಲೈಟ್ ಆದರೆ, ಇನ್ನೂ ಕೆಲವರು ವೀಕ್ಷಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಮನೆಯವರನ್ನು ಬಕ್ರಾ ಮಾಡುವ ಉದ್ದೇಶದಿಂದಲೂ ಕೆಲವರು ಕಿತ್ತಾಡಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ

ಸ್ಫೂರ್ತಿ-ಸೋನು

ಸ್ಫೂರ್ತಿ ಹಾಗೂ ಸೋನು ಗೌಡ ನಡುವೆ ಕಿತ್ತಾಟ ನಡೆದಿದೆ. ಇದಕ್ಕೆ ಕಾರಣವಾಗಿದ್ದು ‘ಡವ್ ರಾಣಿ’ ಎಂಬ ಶಬ್ದ. ಹಾಸ್ಯದಲ್ಲಿ ಆರಂಭವಾದ ಮಾತು ನಂತರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸ್ಫೂರ್ತಿಯನ್ನು ಸೋನು ಅವರು ಡವ್ ರಾಣಿ ಎಂದು ಕರೆದಿದ್ದಾರೆ. ಈ ಕಾರಣಕ್ಕೆ ಜಗಳ ತೀವ್ರ ಸ್ವರೂಪ ಪಡೆದುಕೊಂಡಿತು.

ರಾಕೇಶ್-ರೂಪೇಶ್

ರಾಕೇಶ್ ಹಾಗೂ ರೂಪೇಶ್ ಮನೆಯಲ್ಲಿ ಕಿತ್ತಾಡಿಕೊಂಡಿದ್ದಾರೆ. ಹಾಗಂತ ಇದು ನಿಜವಾಗಿ ನಡೆದ ಜಗಳ ಆಗಿರಲೇ ಇಲ್ಲ. ಮನೆ ಮಂದಿಯನ್ನು ಕುರಿ ಮಾಡುವ ಉದ್ದೇಶದಿಂದ ಆದ ಜಗಳ. ರಾಕೇಶ್ ಹಾಗೂ ರೂಪೇಶ್ ದೊಡ್ಡದಾಗಿ ಕೂಗಾಡಿಕೊಳ್ಳಲು ಆರಂಭಿಸಿದರು. ಇದನ್ನು ನೋಡಿ ಮನೆಮಂದಿ ಎಲ್ಲ ಒಂದೆಡೆ ಸೇರಿದರು. ಈ ವೇಳೆ ರಾಕೇಶ್ ಅವರು ರೂಪೇಶ್ ಮೈಯನ್ನು ಮುಟ್ಟಿದರು. ‘ನನ್ನ ಮೈ ಮುಟ್ಟಬೇಡ ಸರಿ ಇರಲ್ಲ’ ಎಂದರು ರೂಪೇಶ್. ‘ನಾನು ಮುಟ್ತೀನಿ ಏನ್ ಮಾಡ್ತೀಯಾ?’ ಎಂದು ರಾಕೇಶ್ ರಾಂಗ್​ ಆದರು. ಇವರ ಜಗಳ ನೋಡಿ ಮನೆ ಮಂದಿ ಸ್ವಲ್ಪ ಭಯಗೊಂಡರು. ನಂತರ ಇದು ಜೋಕ್ ಅನ್ನೋದು ಗೊತ್ತಾಗಿದೆ.

https://www.instagram.com/p/ChAb7IPMXVu/embed/captioned/?cr=1&v=14&wp=540&rd=https%3A%2F%2Ftv9kannada.com&rp=%2Fentertainment%2Ftelevision%2Fbigg-boss-ott-rakesh-and-roopesh-spoorthi-and-sonu-gowda-quarrel-in-bigg-boss-house-rmd-au34-425551.html#%7B%22ci%22%3A0%2C%22os%22%3A918.4000000953674%2C%22ls%22%3A283.7999997138977%2C%22le%22%3A910.2999997138977%7D

ಮೊಟ್ಟೆ ವಿಚಾರಕ್ಕೆ ಅಸಮಾಧಾನ

ಸೋನು ಗೌಡ ಅವರು ಮೊಟ್ಟೆ ವಿಚಾರಕ್ಕೆ ಕೆಲವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ‘ನಾನು ಒಂದು ಮೊಟ್ಟೆ ತೆಗೆದುಕೊಳ್ಳುತ್ತೇನೆ ಎಂದರೂ ನೀವು ಬಿಡಲಿಲ್ಲ’ ಎಂದು ಗುರೂಜಿ ವಿರುದ್ಧ ಅವರು ದೂರಿದ್ದಾರೆ.

ಜಯಶ್ರೀ-ಉದಯ್​

ಜಯಶ್ರೀ ಆರಾಧ್ಯ ಹಾಗೂ ಉದಯ್ ಸೂರ್ಯ ಅವರು ಸಣ್ಣ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಜಯಶ್ರೀ ಬಗ್ಗೆ ಉದಯ್ ತುಂಬಾನೇ ಸಿಟ್ಟಾಗಿದ್ದಾರೆ. ಈ ಪ್ರೋಮೋ ಸಖತ್ ವೈರಲ್ ಆಗಿದೆ.