ಕುಂದಾಪುರ: ಅರಿವಿದ್ದಾಗಲೀ, ಅರಿವಿಲ್ಲದೇ ಆಗಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವಂತಿಲ್ಲ. ಕಾನೂನು ಮೀರಿ ಅಗೌರವ ತೋರುವಂತಿಲ್ಲ. ಧ್ವಜ ಹಾರಿಸಲು ಯಾವುದೇ ಜಾತಿ, ಧರ್ಮ, ಭಾಷೆಯ ಗೋಡೆ ಅಡ್ಡ ಇಲ್ಲ. ನಿರ್ದಿಷ್ಟ ಆದೇಶಗಳನ್ನು ಹೊರತಾಗಿಸಿ ಯಾರು ಬೇಕಾದರೂ, ಯಾವ ದಿನ ಬೇಕಾದರೂ ರಾಷ್ಟ್ರಧ್ವಜ ಹಾರಿಸಬಹುದು. ಸ್ವಾತಂತ್ರದAದು ರಜೆ ದೊರೆಯಿತೆಂದು ತಿರುಗಲು ಹೋಗುವ ಬದಲು ಎಲ್ಲಾದರೂ ಒಂದುಕಡೆ ಧ್ವಜದ ಕೆಳಗೆ ನಿಂತು ಮೂರು ಗೀತೆಗಳನ್ನು ಹಾಡಿ ಗೌರವಿಸುವುದು, ದೇಶ ವಾಸಿಗಳ ಕರ್ತವ್ಯ ಎಂದು ಭಾರತ ಸೇವಾದಳದ ಆರೂರು ತಿಮ್ಮಪ್ಪ ಶೆಟ್ಟಿ ಹೇಳಿದರು.
ಪುರಸಭೆಯಲ್ಲಿ ಭಾರತ ಸೇವಾದಳ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪುರಸಭೆ ವತಿಯಿಂದ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಾಗಿ ನಡೆದ ಭಾರತದ ರಾಷ್ಟ್ರಧ್ವಜ ನೀತಿಸಂಹಿತೆ, ಧ್ವಜಾರೋಹಣ ಪ್ರತ್ಯಕ್ಷಿಕೆಯಲ್ಲಿ ಮಾತನಾಡಿದರು. ೧೯೭ ರಿಂದಲೇ ಬೇರೆ ಬೇರೆ ಧ್ವಜಗಳು ಬಳಕೆಗೆ ಬಂದರೂ ಅಂತಿಮವಾಗಿ ಈಗ ಇರುವ ಧ್ವಜವೇ ಒಪ್ಷಿತವಾದುದು. ಇದರಲ್ಲಿ ಇರುವ ಬಣ್ಣಗಳಲ್ಲಿ ಮೇಲಾಟ ಇಲ್ಲ. ಧರ್ಮ, ಜಾತಿಗೆ ಸಂಬAಧಿಸಿದಲ್ಲ. ೧,೬೪೮ ಭಾಷೆಗಳು, ೬,೪೦೦ ಜಾತಿಗಳು ಇರುವ ಭಾರತದಲ್ಲಿ ಧ್ವಜದ ಬಣ್ಣಗಳನ್ನು ಮೀಸಲಿಡುವುದು ಸರಿಯಲ್ಲ. ತ್ಯಾಗ, ಅಹಿಂಸೆ, ಸೌವಾರ್ಥತೆಯ ಸೌಹಾರ್ದ ಸಂಕೇತವಾಗಿ ಅವುಗಳನ್ನು ಪರಿಗಣಿಸಬೇಕು ಎಂದರು. ಮುಖ್ಯ ಅಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸ್ವಾತಂತ್ರದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ ೧೩ ರಿಂದ ಆಗಸ್ಟ್ ೧೫ರವರೆಗೆ ಮನೆಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಕೇಂದ್ರ ಸರ್ಕಾರ ಸೂಚಿಸಿದ್ದು ಅದರಂತೆ ರಾಷ್ಟ್ರಧ್ವಜಗಳ ತಯಾರಿ, ವಿತರಣೆ ನಡೆಸಲಾಗುತ್ತಿದೆ. ಆದರೆ ಧ್ವಜ ಹಾರಿಸುವ ಸಂದರ್ಭ ಪಾಲಿಸಬೇಕಾದ ನಿಯಮಗಳ ಅರಿವಿನ ಕೊರತೆ ಅನೇಕರಲ್ಲಿ ಇದ್ದು ದ್ವಜಸಂಹಿತೆಯ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು. ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷ ವಹಿಸಿದರು. ಉಪಾಧ್ಯಕ್ಷ ಸಂದೀಪ್ ಸಾಯಿ ಸಮಿತಿಯ ಅಧ್ಯಕ್ಷ ಗಿರೀಶ್ ಜಿ.ಕೆ. ಉಪಸ್ಥಿತರಿದ್ದರು.