Tuesday, January 21, 2025
ಸುದ್ದಿ

ಬನ್ನೂರು: ಕುಡಿಯುವ ನೀರು ಸರಬರಾಜಿನ ನಿವೃತ್ತ ಪಂಪ್ ಆಪರೇಟರ್ ಪದ್ಮನಾಭ ನಾಯಕ್ ವಿಧಿವಶ – ಕಹಳೆ ನ್ಯೂಸ್

ಪುತ್ತೂರು: ಬನ್ನೂರಿನಲ್ಲಿ ಕುಡಿಯುವ ನೀರು ಸರಬರಾಜಿನ ನಿವೃತ ಪಂಪ್ ಆಪರೇಟರ್ ಪದ್ಮನಾಭ ನಾಯಕ್ (70ವ) ರವರು ಆ.10 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಆರೈಕೆ ಪಡೆಯುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಲವು ವರ್ಷಗಳ ಹಿಂದೆ ಸುಸ್ವಾಗತ್ ಹೊಟೇಲ್ ಇದ್ದ ಸಂದರ್ಭದಲ್ಲಿ ಚಹಾ ವಿಭಾಗದಲ್ಲಿ ಇದರ ಜೊತೆಯಲ್ಲಿ ಪಂಚಾಯತ್, ಪುರಸಭೆ, ನಗರಸಭೆಯ ಸಂದರ್ಭದಲ್ಲೂ ಬನ್ನೂರು ಸುತ್ತಮುತ್ತ ಕುಡಿಯುವ ನೀರು ಸರಬರಾಜಿನಲ್ಲಿ ಪಂಪ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನಿವೃತ್ತಿ ಬಳಿಕವೂ ಗುತ್ತಿಗೆ ವ್ಯವಸ್ಥೆಯಲ್ಲಿ ಪಂಪ್ ಆಪರೇಟರ್ ಆಗಿ ಕೆಲಸ ಮುಂದುವರಿಸಿದ್ದರು. ಎರಡು ವರ್ಷದಿಂದ ಅನಾರೋಗ್ಯದಿಂದ ಮನೆಯಲ್ಲೇ ಇದ್ದ ಅವರು ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ ಗಣೇಶ್, ಪುತ್ರಿ ರೇಖಾ, ಅಳಿಯ, ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.