ಮಂಗಳೂರು: ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಕಾರ್ಯ ನಿರ್ವಹಣಾ ತಂಡದ ಸಭೆ ಸಂಘನಿಕೇತನದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ವಿಜಯ್ ಕುಮಾರ್ ಶೆಟ್ಟಿ ಅವರ ಅದ್ಯಕ್ಷತೆಯಲ್ಲಿ ಹಾಗೂ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಜರುಗಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ಶ್ರೀ ಡಿ ವೇದವ್ಯಾಸ ಕಾಮತ ಅವರು ಆಜಾದಿ ಕಾ ಅಮೃತ್ ಮಹೋತ್ಸವ ಹಾಗೂ ಹರ್ ಘರ್ ತಿರಂಗ ಅಭಿಯಾನದಲ್ಲಿ ಎಲ್ಲ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡುತ್ತಾ , ಅಮರ ಸುಳ್ಯ ಕ್ರಾಂತಿಯ ರೂವಾರಿ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನು ಸ್ಥಾಪಿಸುವ ಮತ್ತು ಬಿಕರ್ಣಕಟ್ಟೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಆಜಾದಿ ಕಾ ಅಮೃತ್ ಮಹೋತ್ಸವ ವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ ಅವರು ಮಾತನಾಡಿ ಬೂತ್ ಸಶಕ್ತಿಕರಣ ಕಾರ್ಯಕ್ರಮ ಮಂಡಲದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಇದರಲ್ಲಿ ತೊಡಗಿರುವ ಕಾರ್ಯಕರ್ತರಿಗೆ ಅಭಿನಂದನೆ ಸಲಿಸುತ್ತಾ ಆಜಾದಿ ಕಾ ಅಮೃತ್ ಮಹೋತ್ಸವ ಹಾಗೂ ಹರ್ ಘರ್ ತಿರಂಗ ಕಾರ್ಯಕ್ರಮ ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ಎಲ್ಲ ವಾರ್ಡ್ ಗಳಲ್ಲಿ ಸಭೆಗಳು ನಡೆಯುತ್ತಿದ್ದು, ಮುಂದೆ ಪಕ್ಷವು ಆಯೋಜಿಸುವ ಎಲ್ಲ ಕಾರ್ಯಕ್ರಮಗಳಿಗೆ ಕಾರ್ಯಕರ್ತರ ಸಹಕಾರವನ್ನು ಕೋರಿದರು,
ಜಿಲ್ಲಾಧ್ಯಕ್ಷರಾದ ಶ್ರೀ ಸುದರ್ಶನ್ ಎಂ ಅವರು ಮಾತನಾಡಿ ಕಾರ್ಯಕರ್ತರು ಮನೆ ಸಂಪರ್ಕ ಹಾಗೂ ಬೂತ್ ಮಟ್ಟದ ಸಂಘಟನೆ ಮೂಲಕ ಪಕ್ಷವನ್ನು ಇನ್ನಷ್ಟು ಸದೃಢ ಗೊಳಿಸಬೇಕೆಂದು ಕರೆ ನೀಡಿದರು .ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಂದ್ರ ಜೆ ಸ್ವಾಗತಿಸಿ , ಮಂಡಲ ಉಪಾಧ್ಯಕ್ಷರಾದ ಶ್ರೀ ರಮೇಶ್ ಹೆಗ್ಡೆ ಧನ್ಯವಾದ ಸಮರ್ಪಿಸಿದರು , ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೂಪ ಡಿ ಬಂಗೇರ ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ಮೋನಪ್ಪ ಭಂಡಾರಿ ,ಮಾಜಿ ಉಸ್ತುವಾರಿ ಸಚಿವರಾದ ಶ್ರೀ ನಾಗರಾಜ ಶೆಟ್ಟಿ , ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸಾದ್ ಕುಮಾರ್ ,ವಿಭಾಗ ಪ್ರಭಾರಿ ಶ್ರೀ ಉದಯ ಕುಮಾರ್ ಶೆಟ್ಟಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಂಡಲ ಪ್ರಭಾರಿ ಶ್ರೀಮತಿ ಕಸ್ತೂರಿ ಪಂಜ ಉಪಾಧ್ಯಕ್ಷರು ಹಾಗೂ ಮಂಡಲ ಪ್ರಭಾರಿ ಶ್ರೀ ಸಂತೋಷ್ ರೈ ಬೋಳಿಯಾರ್ , ಜಿಲ್ಲಾ ಪ್ರಭಾರಿ ಶ್ರೀ ರಾಜೇಶ್ ಕಾವೇರಿ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸುಧೀರ್ ಶೆಟ್ಟಿ ಕಣ್ಣೂರ್ , ಮ ನ ಪಾ ಮಹಾಪೌರರಾದ ಶ್ರೀ ಪ್ರೇಮಾನಂದ ಶೆಟ್ಟಿ , ಜಿಲ್ಲಾ ವಕ್ತಾರರಾದ ಶ್ರೀ ರವಿಶಂಕರ್ ಮೀಜಾರ್ ,ಮೀನುಗಾರಿಕಾ ನಿಗಮದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ನಿತಿನ್ ಕುಮಾರ್ ,ಮಂಡಲ ಉಪಾಧ್ಯಕ್ಷರಾದ ಶ್ರೀ ರಮೇಶ್ ಕಂಡೆಟ್ಟು ಶ್ರೀ ಕಿರಣ್ ರೈ , ಶ್ರೀ ದೀಪಕ್ ಪೈ ,ಶ್ರೀ ಅಜಯ ಕುಲಶೇಕರ್ ,ಮಂಡಲದ ಪದಾಧಿಕಾರಿಗಳು ,ಜಿಲ್ಲಾ ಪದಾಧಿಕಾರಿಗಳು, ,ಮ ನ ಪಾ ಸದಸ್ಯರು ,ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ,ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠದ ಸಂಚಾಲಕರು ಹಾಗೂ ಸಹ ಸಂಚಾಲಕರು , ಮನ್ ಕಿ ಬಾತ್ ಪ್ರಮುಖರು ,ಶಕ್ತಿ ಕೇಂದ್ರ ಪ್ರಭಾರಿಗಳು ಹಾಗೂ ಶಕ್ತಿ ಕೇಂದ್ರದ ಪ್ರಮುಖರು ಉಪಸ್ಥಿತರಿದ್ದರು.
You Might Also Like
ಜ.30ರಂದು ಜಿ.ಎಲ್ ಮಹಲ್ ಮಳಿಗೆಯ ಶಿವ ಆರ್ಕೇಡ್ ನಲ್ಲಿ ಕಲ್ಪವೃಕ್ಷ ಫೈನಾನ್ಸ್, ಕಾಪೋರೇಶನ್ ರಿ. ಶುಭಾರಂಭ – ಕಹಳೆ ನ್ಯೂಸ್
ಪುತ್ತೂರು ಮುಖ್ಯ ರಸ್ಥೆಯ ಜಿ.ಎಲ್ ಮಹಲ್ ಮಳಿಗೆಯ ಶಿವ ಆರ್ಕೇಡ್ ನಲ್ಲಿ ಕಲ್ಪವೃಕ್ಷ ಫೈನಾನ್ಸ್, ಕಾಪೋರೇಶನ್ ರಿ. ಇದೇ ಬರುವ ಜ.30ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಚಿನ್ನಾಭರಣ ಸಾಲ,...
ಗೌರವ ಡಾಕ್ಟರೇಟ್ ಪಡೆದ ನಟ, ಖ್ಯಾತ ಸಂಗೀತ ನಿರ್ದೇಶಕ ಸಾಧುಕೋಕಿಲ : ಸಾಧು ನಹೀ ಡಾಕ್ಟರ್ ಸಾಧು ಬೋಲೋ-ಕಹಳೆ ನ್ಯೂಸ್
ಮೈಸೂರು : ಸಂಗೀತ ಕ್ಷೇತ್ರದಲ್ಲಿನ ಸಾಧನೆ, ಸೇವೆ ಗುರುತಿಸಿ ಪ್ರದರ್ಶಕ ಕಲೆಗಳ ವಿಭಾಗದಿಂದ ಚಲನಚಿತ್ರ ನಟ, ಖ್ಯಾತ ಸಂಗೀತ ನಿರ್ದೇಶಕ ಸಾಧುಕೋಕಿಲ ಅವರಿಗೆ ಗೌರವ ಡಾಕ್ಟರೇಟ್ ನೀಡಿ...
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಾಳೆ ಕದ್ರಿ ಮ್ಯೂಸಿಕಲ್ ನೈಟ್ಸ್ ಕಲರವ – ಕಹಳೆ ನ್ಯೂಸ್
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನದಲ್ಲಿ ಇದೇ ಜನವರಿ 21 ರ ಮಂಗಳವಾರ ಸಂಜೆ...
ಬೆಂಗಳೂರಲ್ಲಿ ಭೀಕರ ಸರಣಿ ಅಪಘಾತ : ಪವಾಡ ಸದೃಶವಾಗಿ ಕಾರು ಚಾಲಕ ಪಾರು…!-ಕಹಳೆ ನ್ಯೂಸ್
ಬೆಂಗಳೂರು : ನೆಲಮಂಗಲದಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಪವಾಡ ಸದೃಶವಾಗಿ ಕಾರು ಚಾಲಕ ಪಾರಾಗಿದ್ದಾನೆ. ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ-48ರ ಗುಂಡೇನಹಳ್ಳಿ ಬಳಿ ಭೀಕರ...