Recent Posts

Monday, January 20, 2025
ವಾಣಿಜ್ಯಸಿನಿಮಾಸುದ್ದಿ

ಶೂಟಿಂಗ್ ವೇಳೆ ಕಾಲು ಮುರಿದುಕೊಂಡ ಕರಾವಳಿ ಬೆಡಗಿ, ನಟಿ ಶಿಲ್ಪಾ ಶೆಟ್ಟಿ – ಕಹಳೆ ನ್ಯೂಸ್

ಶೂಟಿಂಗ್ ವೇಳೆ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕಾಲು ಮುರಿದುಕೊಂಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಅವರ ಕಾಲಿಗೆ ಪೆಟ್ಟಾಗಿರೋ ಫೋಟೋವನ್ನು ಶಿಲ್ಪಾ ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ‘ಇಂಡಿಯನ್ ಪೊಲೀಸ್ ಫೋರ್ಸ್​’ (‘Indian Police Force’) ವೆಬ್ ಸೀರಿಸ್​ನಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಮೆಜಾನ್ ಪ್ರೈಮ್ OTTಯಲ್ಲಿ ಈ ವೆಬ್ ಸೀರಿಸ್ ಪ್ರಸಾರವಾಗಲಿದೆ. ರೋಹಿತ್ ಶೆಟ್ಟಿ (Rohith Shetty) ಪ್ರಾಜೆಕ್ಟ್​ಗಳಲ್ಲಿ ಆಯಕ್ಷನ್ (Action)​ ಹೆಚ್ಚೇ ಇರುತ್ತದೆ. ಈ ಸರಣಿಯ ಶೂಟಿಂಗ್ ವೇಳೆ ಶಿಲ್ಪಾ ಕಾಲಿಗೆ ಪೆಟ್ಟಾಗಿದೆ.

ಆಕ್ಷನ್​ ಸೀನ್​ ಶೂಟಿಂಗ್​ ವೇಳೆ ಅವಘಡ

ರೋಹಿತ್ ಶೆಟ್ಟಿ ತಮ್ಮ ಮುಂಬರುವ ಚಿತ್ರ ‘ಇಂಡಿಯನ್ ಪೊಲೀಸ್ ಫೋರ್ಸ್’ ಶೂಟಿಂಗ್ ಮಾಡ್ತಿದ್ರು . ಅವರು ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರಾ, ಶಿಲ್ಪಾ ಶೆಟ್ಟಿ ಮತ್ತು ನಿಕಿತಿನ್ ಧೀರ್ ಅವರೊಂದಿಗೆ ರೋಮಾಂಚಕ ಆಕ್ಷನ್ ಸೀಕ್ವೆನ್ಸ್ ಅನ್ನು ಚಿತ್ರೀಕರಿಸುತ್ತಿದ್ರು. ಶೂಟಿಂಗ್​ ವೇಳೆ ಸ್ವಲ್ಪ ಸಮಯದ ನಂತರ, ಶಿಲ್ಪಾ ತನ್ನ ಕಾಲಿಗೆ ಗಾಯವಾಗಿದೆ ಎಂದು ಪೋಸ್ಟ್​ ಮಾಡಿದ್ದಾರೆ. ಶಿಲ್ಪಾ ಶಿಟ್ಟಿ ಅವರ ಎಡಗಾಲಿಗೆ ಪೆಟ್ಟಾಗಿದ್ದು, ಬ್ಯಾಂಡೆಡ್​ ಮಾಡಿರೋ ಫೋಟೋವನ್ನು ಹಂಚಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಕಾಲಿಗೆ ಪೆಟ್ಟು

ಕಾಲಿಗೆ ಪೆಟ್ಟಾದ ಬಳಿಕವೂ ಚಿಕಿತ್ಸೆ ಬಳಿಕ ಶಿಲ್ಪಾ ಶೆಟ್ಟಿ ನಗುತ್ತಲೇ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟೀವ್ ಆಗಿರೋ ಶಿಲ್ಪಾ ಶೆಟ್ಟಿ ಅವರು ಆಗಾಗೆ ಫೋಟೋ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಯೋಗ, ಫಿಟ್ನೆಸ್ ಬಗ್ಗೆ ಅಭಿಮಾನಿಗಳಿಗೆ ಟಿಪ್ಸ್ ಕೊಡುತ್ತಾ ಇರುತ್ತಾರೆ, ಇದೀಗ ಕಾಲಿಗೆ ಪೆಟ್ಟು ಬಿದ್ದು ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಲ್ಲೇ ತೆಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಗುತ್ತಾ ಪೋಸ್​ ಕೊಟ್ಟ ಶಿಲ್ಪಾ!

ನಗುತ್ತಾ ಪೋಸ್​ ಕೊಟ್ಟ ಶಿಲ್ಪಾ , ಹೀಗೆ ಬರೆದುಕೊಂಡಿದ್ದಾರೆ. ರೋಲ್ ಕ್ಯಾಮೆರಾ ಆಕ್ಷನ್ – “ಕಾಲು ಮುರಿದುಕೊಂಡೆ!”. 6 ವಾರಗಳವರೆಗೆ ನನಗೆ ರೆಸ್ಟ್​ ಮಾಡಲು ವೈದ್ಯರು ತಿಳಿಸಿದ್ದಾರೆ. ಆದರೆ ನಾನು ಶೀಘ್ರದಲ್ಲೇ ಗುಣಮುಖವಾಗಿ ಶೂಟಿಂಗ್​ಗೆ ಹೋಗುವೆ ಎಂದು ಶಿಲ್ಪಾ ಶೆಟ್ಟಿ ಕುಂದ್ರಾ ಬರೆದುಕೊಂಡಿದ್ದಾರೆ.

ರಾಕಿ ಭಾಯ್ ಸ್ಟೈಲ್​ ಕಾಪಿ ಮಾಡಿದ ಶಿಲ್ಪಾ ಶೆಟ್ಟಿ!

ಕೆಜಿಎಫ್​ 2 ಸಿನಿಮಾ ಕ್ರಿಯೆಟ್​ ಮಾಡಿದ ಕ್ರೇಜ್​ ಪದಗಳಲ್ಲಿ ಬರೆಯಲು ಸಾಧ್ಯವಿಲ್ಲ. ಈ ಸಿನಿಮಾದ ಡೈಲಾಗ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್ ಮಾಡುತ್ತಿದೆ. ಇನ್​ಸ್ಟಾಗ್ರಾಂನಲ್ಲಿ ಸೆಲೆಬ್ರಿಟಿಗಳು ಯಶ್​ ಅವರ ವೈಲೆನ್ಸ್​ ಡೈಲಾಗ್​ಗೆ ರೀಲ್ಸ್​ ಮಾಡುತ್ತಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಕೂಡ ಇದೀಗ ರಾಕಿ ಭಾಯ್​ ಸ್ಟೈಲ್​ ಕಾಪಿ ಮಾಡಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಕೆಜಿಎಫ್​ 2 ಸಿನಿಮಾ ಡೈಲಾಗ್​ ಹೇಳಿದ್ದಾರೆ ನಟಿ ಶಿಲ್ಪಾ ಶೆಟ್ಟಿ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

‘ಐ ಡೋಂಟ್​ ಲೈಕ್​ ವೈಲೆನ್ಸ್’​ ಎಂದ ಶಿಲ್ಪಾ ಶೆಟ್ಟಿ!

ಕೆಜಿಎಫ್​ 2 ಸಿನಿಮಾ ಬಗ್ಗೆ ಮಾತನಾಡದೇ ಇರುವವರ ಸಂಖ್ಯೆ ತೀರಾ ಕಡಿಮೆ ಅನ್ನಬಹುದು. ಪುಟ್ಟ-ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ರಾಕಿ ಭಾಯ್ ಅಬ್ಬರ ಇಷ್ಟವಾಗಿದೆ. ಈ ಸಿನಿಮಾದಲ್ಲಿ ಬರುವ ಡೈಲಾಗ್ಸ್​ಗಳನ್ನು ಹೇಳುತ್ತಿರುತ್ತಾರೆ. ಅದರಲ್ಲೂ ವೈಲೆನ್ಸ್​ ಡೈಲಾಗ್​ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿದೆ.ಈಗ ಶಿಲ್ಪಾ ಶೆಟ್ಟಿ ‘ವೈಲೆನ್ಸ್​.. ವೈಲೆನ್ಸ್​.. ಐ ಡೋಂಟ್​ ಲೈಕ್​ ಇಟ್​. ಬಟ್​ ವೈಲೆನ್ಸ್​ ಲೈಕ್ಸ್​ ಮೀ’ ಎಂದು ಹೇಳಿದ್ದಾರೆ. ಈ ಹಿಂದೆ ರವೀನಾ ಟಂಡನ್​ ಮಾಡಿರುವ ರಮೀಕಾ ಸೇನ್​ ಪಾತ್ರ ಮೆಚ್ಚಿದ್ದ ಶಿಲ್ಪಾ ಶೆಟ್ಟಿ ಈ ಬಗ್ಗೆ ಟ್ವೀಟ್ ಮಾಡಿದ್ದರು.