Recent Posts

Sunday, January 19, 2025
ಸಿನಿಮಾ

ತುಳು ಚಿತ್ರರಂಗದ ‘ಪೆಟ್ಟಾಯಿ ಪಿಲಿ’ ಸದಾಶಿವ ಸಲ್ಯಾನ್ ಇನ್ನಿಲ್ಲ – Kahale News

ಮಂಗಳೂರು, ಜು 09: ತುಳು ಚಿತ್ರರಂಗದಲ್ಲಿ ಮಿಂಚಿದ್ದ ತಾರೆ ಸದಾಶಿವ ಸಾಲಿಯಾನ್ ಇನ್ನಿಲ್ಲ. ಪಾದೆಹೌಸ್ ಹೊಸಬೆಟ್ಟು ಮೂಲದ ಸದಾಶಿವ ಸಾಲಿಯನ್ ಪೆಟ್ಟಾಯಿ ಪಿಲಿ ಸೇರಿದಂತೆ ತುಳು ವಿನ ಅನೇಕ ಚಿತ್ರಗಳಲ್ಲಿ ನಟಿಸಿದ್ದರು.

ಮುಂಬಯಿ ಹವ್ಯಾಸಿ ನಾಟಕ ರಂಗದಲ್ಲಿ ಹುಟ್ಟಿ ಬೆಳೆದು ಬಹು ಜನಮನ್ನಣೆಗೆ ಪಾತ್ರರಾಗಿ ಮುಂದೆ ಕನ್ನಡ,ತುಳು ಚಿತ್ರರಂಗದಲ್ಲಿ ಮಿಂಚಿದ ಮಂಬಯಿ ಕನ್ನಡಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇವರು ಸುಮಾರು 50 ಚಿತ್ರಗಳಲ್ಲಿ ನಟಿಸಿದ ಏಕೈಕ ಮುಂಬಾಯಿ ರಂಗ ಕಲಾವಿದನೆಂಬ ಹೆಗ್ಗಳಿಗೆ ಪಾತ್ರರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಬದ್ಕೆರೆ ಬುಡ್ಲೆ, ಪಟ್ಟಾಯಿ ಪಿಲಿ, ಸತ್ಯಓಲುಂಡು, ದಾರೆದ ಸೀರೆ, ಸಮರ ಸಿಂಹ, ಇವಳಂತಹೆಂಡ್ತಿ, ಅನಾಥ ರಕ್ಷಕ, ಸಿಡಿದೆದ್ದ ಪಾಂಡವರು, ಕಾಲೇಜು ರಂಗ, ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಖಳ ನಟನ ಪಾತ್ರದ ಮೂಲಕ ಜನಮನ್ನಣೆ ಗಳಿಸಿದ್ದರು. ಆದರೆ, ಅನಾರೋಗ್ಯದ ಕಾರಣದಿಂದ ಕಳೆದ ಒಂದೂವರೆ ದಶಕಗಳಿಂದ ಚಿತ್ರರಂಗದಿಂದ ದೂರವಾಗಿದ್ದರು.

ಮುಂಬೈ ನ ಬಳಿಯ ಠಾಣೆಯ ಮೀರಾರೋಡ್ ನಲ್ಲಿ ತನ್ನ ಮಗಳು, ಅಳಿಯ ಮತ್ತು ಮೊಮ್ಮಕ್ಕಳ ಜೊತೆ ನಲೆಸಿದ್ದ ಅವರು ಕೆಲ ಕಾಲದ ಅಸ್ವಸ್ಥತೆಯಿಂದ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯ ಕ್ರಿಯೆ ನಾಳೆ ಮುಂಬೈನ ಮೀರಾ ರೋಡ್‌ನ ನಿವಾಸದಲ್ಲಿ ನಡೆಯಲಿದೆ.