Recent Posts

Tuesday, January 21, 2025
ಸುದ್ದಿ

ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಕುಂದಾಪುರ ಮಂಡಲ ವತಿಯಿಂದ ರಕ್ಷಾ ಬಂಧನ ಆಚರಣೆ- ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕುಂದಾಪುರ: ಬಿಜೆಪಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಇಂದು ಕುಂದಾಪುರ ಪೊಲೀಸ್ ಠಾಣೆಗೆ ತೆರಳಿ ಸರ್ಕಲ್ ಇನ್ಸ್ಪೆಕ್ಟರ್ ಗೋಪಿಕೃಷ್ಣ, ಎಸ್ ಐ ಸದಾಶಿವ ಗವರೋಜಿ ಮತ್ತು ಠಾಣಾ ಸಿಬ್ಬಂದಿ ವರ್ಗದವರಿಗೆ ರಕ್ಷೆ ಕಟ್ಟುವ ಮೂಲಕ ಹಗಲಿರುಳು ಸಮಾಜದ ಸ್ವಾಸ್ಥ್ಯ ಕಾಯುವ ಆರಕ್ಷಕರೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಲಾಯಿತು.

ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಕಾರ್ಯದರ್ಶಿ ಅನಿತಾ ಶ್ರೀಧರ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸೌರಭಿ ಪೈ, ಜಯಲಕ್ಷ್ಮೀ ಗಾಣಿಗ, ಉಪಾಧ್ಯಕ್ಷೆ ಶ್ವೇತಾ, ನೇತ್ರಾವತಿ ಮಡಿವಾಳ, ಕಾರ್ಯದರ್ಶಿ ರೋಹಿಣಿ ಪೈ, ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್, ಆಶಾಲತಾ ನಾಯಕ್, ಪುರಸಭೆ ಅಧ್ಯಕ್ಷರಾದ ವೀಣಾ ಭಾಸ್ಕರ್, ಸದಸ್ಯರಾದ ಶ್ವೇತಾ ಸಂತೋಷ್, ವನಿತಾ ಬಿಲ್ಲವ, ಪುಷ್ಪಾ ಶೇಟ್, ದಿವಾಕರ್ ಕಡ್ಗಿ, ಹಾಲಾಡಿ ಮಹಾಶಕ್ತಿ ಕೇಂದ್ರ ಮ.ಮೋ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಯುವಮೋರ್ಚಾ ಉಪಾಧ್ಯಕ್ಷ ಅಭಿಷೇಕ ಅಂಕದಕಟ್ಟೆ, ಕೋಟೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಾಗಿಣಿ ದೇವಾಡಿಗ, ಸದಸ್ಯರಾದ ಜಯಲಕ್ಷ್ಮೀ ಆಚಾರ್, ವಿಶಾಲಾಕ್ಷಿ, ಪ್ರತಿಮಾ ಚಾತ್ರ, ಸೀಮಿತಾ, ವಿದ್ಯಾ ಖಾರ್ವಿ, ಮಹಿಳಾ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು