ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ | ಹಂತಕ ರಿಯಾಜ್ ಅಂಕತಡ್ಕ ಕರಾಳ ಮುಖ – ಉಳಿದ ಇಬ್ಬರು ಹಂತಕರಿಗೆ ಈತನೇ ಮಾರ್ಗದರ್ಶಿ..!ರಿಯಾಜ್ ಖಾತೆಗೆ ಲಕ್ಷಾಂತರ ರೂಪಾಯಿ ಹಣ ಜಮೆ – ಕಹಳೆ ನ್ಯೂಸ್
ಪುತ್ತೂರು, ಆ 12 : ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕಾರಣದ ಆರೋಪಿಗಳ ಪೈಕಿ ಪ್ರಮುಖ ಆರೋಪಿ ರಿಯಾಜ್ ಅಂಕತಡ್ಕ ನಿವಾಸಿಯಾಗಿದ್ದು, ಇದು ಪ್ರವೀಣ್ ಮನೆಯಿಂದ 3 ಕಿ.ಮೀ. ದೂರದಲ್ಲಿದ್ದು, ಕೃತ್ಯ ನಡೆದ ದಿನ ಉಳಿದ ಇಬ್ಬರು ಹಂತಕರಿಗೆ ಈತನೇ ಮಾರ್ಗದರ್ಶಿ ಆಗಿದ್ದನೆಂಬುದು ತಿಳಿದು ಬಂದಿದೆ.
ಹಿಂದೂ ಯುವತಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ಆಕೆಯನ್ನು ಕೇರಳದ ಕಣ್ಣೂರಿಗೆ ಕರೆದೊಯ್ದು ಮತಾಂತರ ಮಾಡಲು ಯತ್ನ : ರಿಯಾಜ್‌ನ ಸಂಬಂಧಿಯೊಬ್ಬ ಕೆಲವು ವರ್ಷಗಳ ಹಿಂದೆ ಹಿಂದೂ ಯುವತಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ಆಕೆಯನ್ನು ಕೇರಳದ ಕಣ್ಣೂರಿಗೆ ಕರೆದೊಯ್ದು ಮತಾಂತರ ಮಾಡಲು ಯತ್ನಿಸಿದ್ದ. ಅವರು ತೆರಳುತ್ತಿದ್ದ ದಾರಿಯಲ್ಲಿ ಹಿಂದೂ ಸಂಘಟನೆಯವರು ಕಾರನ್ನು ತಡೆದು ಯುವತಿಯನ್ನು ರಕ್ಷಿಸಿದ್ದರು. ಈತನ ನೆರಳಲ್ಲೇ ರಿಯಾಜ್ ಪಳಗಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ. ಆರೋಪಿ ರಿಯಾಜ್ ಸ್ವಲ್ಪ ಸಮಯದ ಹಿಂದೆ ಅಂಕತಡ್ಕದಲ್ಲಿ ತನ್ನ ಸಂಬಂಧಿಯ ಚಿಕನ್ ಸೆಂಟರ್‌ನಲ್ಲಿ ಕೋಳಿ ಮಾಂಸ ಮಾಡುವ ಕೆಲಸ ನಿರ್ವಹಿಸಿದ್ದು ಆ ಬಳಿಕ ರಿಕ್ಷಾ ಡ್ರೈವರ್ ಕೂಡ ಆಗಿದ್ದ. ನಂತರ ಲೈನ್ ಸೇಲ್ ಕೆಲಸ ಮಾಡುತ್ತಿದ್ದು, ಹರಿತವಾದ ಆಯುಧದಿಂದ ಕೋಳಿ ಮಾಂಸ ಮಾಡುವುದನ್ನು ಕರಗತ ಮಾಡಿಕೊಂಡಿದ್ದ ರಿಯಾಜ್ ಅದೇ ಧೈರ್ಯದಲ್ಲಿ ಪ್ರವೀಣ್ ಹತ್ಯೆಗೆ ಒಪ್ಪಿಕೊಂಡಿದ್ದ ಎನ್ನಲಾಗಿದೆ.
ಮೊಬೈಲ್ ಮನೆಯಲ್ಲಿಟ್ಟು ಕೃತ್ಯಕ್ಕೆ ತೆರಳಿದ್ದ ರಿಯಾಜ್ : ಪ್ರವೀಣ್ ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಹುಡುಕುತ್ತಿದ್ದ ಪೊಲೀಸರ ತಂಡಕ್ಕೆ ಕೆಲವು ಆರೋಪಿಗಳ ಬಂಧನದ ಬಳಿಕ ಹತ್ಯೆಯಲ್ಲಿ ರಿಯಾಜ್ ಭಾಗಿಯಾಗಿರುವ ಸುಳಿವು ದೊರೆತಿದ್ದು, ರಿಯಾಜ್‌ನ ಅಂಕತಡ್ಕ ನಿವಾಸದ ಮೇಲೆ ಕಣ್ಣಿಡಲಾಗಿತ್ತು. ಈ ಮಧ್ಯೆ ಆರೋಪಿಯು ಕೃತ್ಯ ನಡೆದ ದಿನ ತನ್ನ ಮೊಬೈಲನ್ನು ಮನೆಯಲ್ಲಿ ಇರಿಸಿ ಕೃತ್ಯದ ಸ್ಥಳಕ್ಕೆ ತೆರಳಿದ್ದು, ಕೃತ್ಯ ನಡೆದ ವೇಳೆ ತಾನು ಮನೆಯಲ್ಲೇ ಇದ್ದೆ ಎನ್ನುವಂತೆ ಬಿಂಬಿಸುವ ಸಲುವಾಗಿ ಈ ರೀತಿ ಮಾಡಿದ್ದ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.
ರಿಯಾಜ್ ಖಾತೆಗೆ ಹಣ ಜಮೆ : ಆರೋಪಿ ರಿಯಾಜ್ ಮನೆಯಲ್ಲಿ ಇರಿಸಿದ್ದ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತ ತನ್ನ ಬ್ಯಾಂಕ್ ಖಾತೆಗೆ ಇದೇ ಮೊಬೈಲ್ ನಂಬರ್ ಲಿಂಕ್ ಮಾಡಿದ್ದು, ಕೃತ್ಯ ಎಸಗಿದ ಅನಂತರ ಬೇರೆ ಬೇರೆ ಕಡೆಗಳಿಂದ ಈತನ ಖಾತೆಗೆ ಹಣ ಸಂದಾಯ ಆಗಿರುವುದು ಕೂಡ ಬೆಳಕಿಗೆ ಬಂದಿದೆ.
ಇಲ್ಲಿಯೇ ಕೊಲೆ ಮಾಡಿದ್ದು..! ಪ್ರವೀಣ್ ಕೊಂದ ಜಿಹಾದಿಗಳಿಂದ ಬೆಳ್ಳಾರೆಯಲ್ಲಿ ಸ್ಥಳ ಮಹಜರ್..! : ಪ್ರವೀಣ್ ಹತ್ಯೆ ನಡೆಸಿದ ಮೂವರು ಆರೋಪಿಗಳನ್ನು ಗುರುವಾರ ಸಂಜೆ ಅಂಕತಡ್ಕ, ಮಾಸ್ತಿಕಟ್ಟೆಯಲ್ಲಿ ಡಿವೈಎಸ್ಪಿ ಗಾನಾ ಪಿ. ಕುಮಾರ್ ನೇತೃತ್ವದಲ್ಲಿ ಸ್ಥಳ ಮಹಜರಿಗೆ ಹಾಜರುಪಡಿಸಲಾಯಿತು.ಮೊದಲಿಗೆ ಆರೋಪಿ ರಿಯಾಜ್‌ನ ಅಂಕತಡ್ಕ ಮನೆಯಲ್ಲಿ ಮಹಜರು ನಡೆಸಲಾಗಿದ್ದು, ಆ ಬಳಿಕ ಜು. 26ರಂದು ಪ್ರವೀಣ್‌ನನ್ನು ಹತ್ಯೆ ನಡೆಸಲಾದ ಮಾಸ್ತಿಕಟ್ಟೆಯ ಅಕ್ಷಯ್ ಚಿಕನ್ ಸೆಂಟರ್ ಮುಂಭಾಗದಲ್ಲಿ ಸ್ಥಳ ಮಹಜರು ನಡೆಯಿತು. ಆರೋಪಿಗಳನ್ನು ಸ್ಥಳಕ್ಕೆ ಕರೆ ತರಲಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬಂಧಿತ ಮೂವರು ಜಿಹಾದಿ ಹಂತಕರಿಗೆ 5 ದಿನ ಪೊಲೀಸ್ ಕಸ್ಟಡಿ : ಇನ್ನು ಪ್ರವೀಣ್ ಹತ್ಯೆ ನಡೆಸಿರುವ ಪ್ರಮುಖ ಆರೋಪಿಗಳಾದ ಸುಳ್ಯದ ಶಿಯಾಬ್, ರಿಯಾಜ್ ಅಂಕತ್ತಡ್ಕ, ಬಶೀರ್ ಎಲಿಮಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ಆಗಸ್ಟ್ 16ರ ತನಕ ಪೊಲೀಸ್ ಕಸ್ಟಡಿ ವಿಧಿಸಿದೆ.
ಮಸೀದಿಯಲ್ಲೆ ಇದ್ದು ನಡೆಯುತ್ತಿದೆ ಸಮಾಜದ್ರೋಹಿ ಕಗ್ಗೂಲೆ..! : ಜಿಹಾದಿ ರಾಕ್ಷಸರ ನಡೆಗೆ ಶಾಸಕ ಸಂಜೀವ ಮಠಂದೂರು ಗರಂ : ಮಸೀದಿಯಲ್ಲಿ ಅಡಗಿದ ಜಿಹಾದಿ ಪಡೆಯನ್ನ ಹೊರ ತರಬೇಕು’ – ಇನ್ನೊಬ್ಬ ಪ್ರವೀಣ್ ನಂತಹ ಅಮಾಯಕನ ಕೊಲೆಯಾಗಬಾರದು SDPI ಮತ್ತು PFI ಸಂಘಟನೆಗಳನ್ನ ಬ್ಯಾನ್ ಆಗಲೇ ಬೇಕು..!
(ಏಜೆನ್ಸೀಸ್)