Tuesday, January 21, 2025
ಸುದ್ದಿ

“ಟೈಕೂನ್ಸ್” ಉತ್ಸವದಲ್ಲಿ ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಒತ್ತು : ಟೀಮ್ ಟೈಕೂನ್ಸ್ ಭರವಸೆ – ಕಹಳೆ ನ್ಯೂಸ್

ಉಡುಪಿ : ಉಡುಪಿಯ ಪುರಭವನದಲ್ಲಿ ನಡೆದ ಟೈಕೂನ್ಸ್ ಉತ್ಸವದಲ್ಲಿ ಸಾವಿರಾರು ಜನರು ಅಲ್ಪಸಮಯದಲ್ಲಿ ಸ್ವಯಂ ಉದ್ಯೋಗವನ್ನು ಪಡೆದು ತಮ್ಮ ಜೀವನವನ್ನು ಕಟ್ಟಿಕೊಂಡ ಹರ್ಷವನ್ನು ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚಿಗೆ ಭಾರತದಾದ್ಯಂತ ವಿಧಿಸಿದ್ದ ಲಾಕ್ಡೌನ್ ಹಿನ್ನಲೆಯಲ್ಲಿ ಕೆಲವೊಂದು ರಾಜ್ಯಗಳ ಸಾಕಷ್ಟು ಜನರು ಉದ್ಯೋಗವನ್ನು ಕಳೆದುಕೊಂಡು ಅವರ ಬದುಕು ದುರ್ಬಲವಾಗಿತ್ತು. ಇಂತಹ ಸಂದರ್ಭದಲ್ಲಿ ಪರ್ಯಾಯ ಉದ್ಯೋಗವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಪಕ್ಕದ ರಾಜ್ಯ ಕೇಳದಲ್ಲಿ ಸಾಕಷ್ಟು ಜನರು ಯಾವುದೇ ಚಿಂತೆ ಇಲ್ಲದೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು‌ ಇದನ್ನು ಗಮನಿಸಿದ ಟೀಮ್ ಟೈಕೂನ್ಸ್ ಸಂಸ್ಥಾಪಕರಾದ ಶೇಕ್ ಫರ್ಹಾನ್ ನಾವೇಕೆ ಇಂತಹ ಮಾರ್ಗವನ್ನು ಅನುಸರಿಸಬಾರದು? ಇದರಲ್ಲಿ ನಮ್ಮ ಸುತ್ತಮುತ್ತಲ ಸಮಾಜಕ್ಕೆ ಉದ್ಯೋಗ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಸಾಮಾಜಿಕ ರಂಗದಲ್ಲೂ ನಮ್ಮ ಸಣ್ಣ ಕಾಣಿಕೆಯನ್ನು ನೀಡಬಹುದಲ್ಲವೇ ಎಂಬಂತಹ ಯೋಚನೆಯನ್ನು ಹೊತ್ತು ಕೇರಳದಲ್ಲಿ ಈಗಾಗಲೇ ಕಾರ್ಯಚರಿಸುತ್ತಿರುವ ಹೈರಿಚ್ ಆನ್ಲೈನ್ ಶಾಪಿ ಸಂಸ್ಥೆಯ ಪ್ರಧಾನ ಕಚೇರಿಗೆ ಜನವರಿ 2022 ಕ್ಕೆ ಭೇಟಿ ನೀಡಿ ಸಂಸ್ಥೆಯು ಈವರೆಗೂ ನಡೆದುಕೊಂಡು ಬಂದ ದಾರಿ ಹಾಗೂ ಸಂಸ್ಥೆ ಏಳಿಗೆಯನ್ನು ಮನಗೊಂಡು ಇಂತಹ ಅವಕಾಶವನ್ನು ನಮ್ಮ ರಾಜ್ಯದಲ್ಲೂ ನೀಡಬೇಕು.

ಅದರಂತೆ ಟೈಕೂನ್ಸ್ ತಂಡದ ಇತರೆ ಪ್ರಮುಖ ಸದಸ್ಯರೊಂದಿಗೆ ಚರ್ಚಿಸಿ ರಾಜ್ಯ ಹಾಗೂ ದೇಶದ ಇತರೆ ಭಾಗಗಳ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಯಶಸ್ವಿಯ ದಾಪುಗಳನ್ನು ಇಟ್ಟು ಇದರಲ್ಲಿ ನಮ್ಮ ಸುತ್ತಮುತ್ತಲ ಜನರು ದಿನ ನಿತ್ಯ ಬಳಸುವಂತಹ ಎಲ್ಲಾ ಪದಾರ್ಥಗಳನ್ನು ಸಾಕಷ್ಟು ರಿಯಾಯಿತಿಗಳನ್ನು ಪಡೆದು ಇಂತಹ ಅವಕಾಶವನ್ನು ಬೇರೆಯವರಿಗೂ ನೀಡುವುದರ ಮುಖಾಂತರ ಇಲ್ಲಿನ ಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಬಲಿಷ್ಠ ಭಾರತವನ್ನು ಕಟ್ಟುವ ಕನಸನ್ನು ಮುಡಿಗೇರಿಸಿ ಕೇವಲ ಐದು ತಿಂಗಳಲ್ಲಿ ಸುಮಾರು 20 ಸಾವಿರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಿ ಅವರುಗಳ ಬದುಕಿಗೆ ಟೀಮ್ ಟೈಕೂನ್ಸ್ ತಂಡ ಬೆನ್ನೆಲುಬಾಗಿ ನಿಂತಿದೆ. ಅದರಂತೆ ಇಲ್ಲಿನ ಉಡುಪಿ ಜಿಲ್ಲೆಯಲ್ಲಿ ಟೈಕೂನ್ಸ್ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿತು.ಕಾರ್ಯಕ್ರಮದಲ್ಲಿ ಮುಖ್ಯಸ್ಥರು ಪ್ರಥಾಪನ್ ಕೆ.ಡ,ಸಂಸ್ಥೆಯ ಸಿ.ಈ.ಓ ಶ್ರೀನಾ ಪ್ರಥಾಪನ್
ಭಾಗವಹಿಸಿದವರು.

ದಿಲೀಪ್ ತಿರೂರು, ಹಾಗೂ ಸಂಸ್ಥೆಯಲ್ಲಿ ಉನ್ನತ ಮಟ್ಟದಲ್ಲಿ ಸಂಪಾದಿಸಿದ ಶಭೀಬ್ ಶಾ, ಅನ್ವರ್ ಮಿರಾನಿಯ, ಟೈಕೂನ್ಸ್ ಸಂಸ್ಥಾಪಕರಾದ ಫರ್ಹಾನ್, ಪತ್ರಕರ್ತರಾದ ರಾಜೇಶ್ ಶೆಟ್ಟಿ, ಮನ್ಸೂರ್ ಹೆಚ್,ಆರ್ ಹಾಗೂ ಇತರರು ಉಪಸ್ಥಿತರಿದ್ದರು