Thursday, January 23, 2025
ರಾಷ್ಟ್ರೀಯವಾಣಿಜ್ಯಸುದ್ದಿ

ಬಾಡಿಗೆ ಮನೆ ಮೇಲೂ ಶೇ.18ರಷ್ಟು ಜಿಎಸ್ ಟಿ: ಜುಲೈ 18ರಿಂದ ಜಾರಿ! – ಕಹಳೆ ನ್ಯೂಸ್

ನೋಂದಾಯಿತ ಬಾಡಿಗೆದಾರರು ಕೂಡ ಇನ್ನು ಮುಂದೆ ಜಿಎಸ್ ಟಿ ( GST) ಪಾವತಿಸಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಸರಕಾರ ಜುಲೈ 18ರಿಂದ ಈ ನಿಯಮ ಜಾರಿಗೆ ತರುತ್ತಿದೆ.

ಜುಲೈ 18ರಿಂದ ಜಾರಿಯಾಗುತ್ತಿರುವ ಹೊಸ ನಿಯಮದ ಪ್ರಕಾರ ಜಿಎಸ್ ಟಿ ನಿಯಮದ ಪ್ರಕಾರ ನೋಂದಾಯಿತ ಬಾಡಿಗೆದಾರರಿಗೆ ಮಾತ್ರ ಈ ನಿಯಮ ಅನ್ವಯ ಆಗಲಿದೆ.

ಇದಕ್ಕೂ ಮುನ್ನ ವಾಣಿಜ್ಯ ಬಳಕೆದಾರರು ಅಂದರೆ ಕಚೇರಿ, ಅಂಗಡಿ, ಬಾಡಿಗೆ ಜಾಗಗಳಿಗೆ ಮಾತ್ರ ಜಿಎಸ್ ಟಿ ಅನ್ವಯ ಆಗುತ್ತಿತ್ತು. ಆದರೆ ಕಾರ್ಪೊರೇಟ್ ಹಾಗೂ ವೈಯಕ್ತಿಕ ಮನೆಗಳ ಬಾಡಿಗೆ ಅಥವಾ ಭೋಗ್ಯದ ಮೇಲೆ ಜಿಎಸ್ ಟಿ ವಿಧಿಸಲಾಗುತ್ತಿರಲಿಲ್ಲ.

ರಿವರ್ಸ್ ಚಾರ್ಜ್ ಮೆಕನಿಸಂ ಅನ್ವಯ ನೋಂದಾಯಿತ ಬಾಡಿಗೆದಾರರು ಕೂಡ ಇನ್ನು ಜಿಎಸ್ ಟಿ ಪಾವತಿಸಬೇಕಾಗುತ್ತದೆ. ವಸತಿ ಬಡಾವಣೆಗಳ ಮೇಲೆ ಈ ನಿಯಮ ಅನ್ವಯ ಆಗುವುದಿಲ್ಲ.

ಸಂಬಳ ಪಡೆಯುವ ವ್ಯಕ್ತಿ ಬಾಡಿಗೆ ಅಥವಾ ಭೋಗ್ಯಕ್ಕೆ ವಾಸವಾಗಿದ್ದರೆ ಆತ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಆದರೆ ವಾಣಿಜ್ಯ ಬಳಕೆ ಅಥವಾ ನೋಂದಾಯಿತ ಬಾಡಿಗೆದಾರ ಜಿಎಸ್ ಟಿ ಪಾವತಿಸುವುದು ಕಡ್ಡಾಯ ಎಂದು ಹೊಸ ನಿಯಮ ಹೇಳುತ್ತದೆ.