Monday, November 25, 2024
ಸುದ್ದಿ

ಉಡುಪಿ : ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಪ್ಲಾಸ್ಟಿಕ್ ಧ್ವಜ ಬಳಸುವಂತಿಲ್ಲ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ – ಕಹಳೆ ನ್ಯೂಸ್

ಉಡುಪಿ : ಈ ಹಿಂದಿನ ವರ್ಷಗಳಲ್ಲಿ ಸ್ವಾತಂತ್ಯೋತ್ಸವದಂದು ನಡೆದಂತೆ ಈ ಬಾರಿಯೂ ರಿಕ್ಷಾ, ಬಸ್, ಟೆಂಪೋ, ಬೈಕ್ ಇತ್ಯಾದಿಗಳಿಗೆ ರಾಷ್ಟ್ರಧ್ವಜ ಕಟ್ಟಿಕೊಂಡು ರ್ಯಾಲಿ ಮಾಡಲು ಅವಕಾಶವಿದೆ. ಆದರೆ ರಾಷ್ಟ್ರಧ್ವಜಕ್ಕೆ ಸ್ವಲ್ಪವೂ ಅವಮಾನ ಆಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಚಾರವಾಗಿ ಮಾಹಿತಿ ನೀಡಿದ ಅವರು, ಹರ್ ಘರ್ ತಿರಂಗಾ ಕಾರ್ಯಕ್ರಮವು ಆ. 13ರಿಂದ 15ರ ವರೆಗೆ ನಡೆಯಲಿದೆ. ಸ್ವಾತಂತ್ರೋತ್ಸವದ ಧ್ವಜಾರೋಹಣವು ಆ. 15ರಂದು ಎಲ್ಲ ಕಡೆಯೂ ನಡೆಯಲಿದೆ. ಸರಕಾರಿ ಕಚೇರಿ, ಶಾಲೆ, ಆಸ್ಪತ್ರೆ ಸಹಿತ ವಿವಿಧ ಕಡೆಗಳಲ್ಲಿ ಸೂರ್ಯೋದಯದ ಅನಂತರ ಧ್ವಜಾರೋಹಣ ನಡೆದು, ಸೂರ್ಯಾಸ್ತದ ಮೊದಲು ಧ್ವಜವನ್ನು ಕೆಳಗೆ ಇಳಿಸಲಾಗುತ್ತದೆ. ಆದರೆ ಈ ವರ್ಷಕ್ಕೆ ಅನ್ವಯವಾಗುವಂತೆ ಮೂರು ದಿನ ಹರ್ ಘರ್ ತಿರಂಗಾ ನಡೆಯುತ್ತಿರುವುದರಿಂದ ಆ. 13ರಿಂದ 15ರ ವರೆಗೆ ಮನೆ, ಕಟ್ಟಡ ಮೊದಲಾದ ಸ್ಥಳಗಳಲ್ಲಿ ರಾತ್ರಿಯೂ ಧ್ವಜಾರೋಹಣ ಇರಲಿದೆ. ಹಾಗೂ ಅಮೃತ ಸರೋವರವಾಗಿ ಅಭಿವೃದ್ಧಿಪಡಿಸಿರುವ ಕೆರೆಯ ಆವರಣಗಳಲ್ಲೂ ಧ್ವಜಾರೋಹಣ ನಡೆಯಲಿದೆ ಎಂದು ಹೇಳಿದರು.

ಹಾಗೂ ತಿರಂಗಾ ಹಾರಿಸುವಾಗ ಧ್ವಜ ಸಂಹಿತೆ ಮರೆಯುವಂತಿಲ್ಲ ಎಂದು ಸೂಚನೆ ನೀಡಿರುವ ಅವರು, ಎಲ್ಲಿಯೂ ಪ್ಲಾಸ್ಟಿಕ್ ಧ್ವಜ ಬಳಸಬಾರದು. ಸ್ವಾತಂತ್ರೋತ್ಸವನ್ನು ಎಲ್ಲರೂ ಸಂಭ್ರಮದಿಂದ ಆಚರಣೆ ಮಾಡುವುದರಿಂದ ಈ ಹಿಂದೆ ಯಾವ ರೀತಿ ಆಚರಣೆ ನಡೆಯುತ್ತಿತ್ತೋ ಅವೆಲ್ಲದಕ್ಕೂ ಅವಕಾಶ ಇದೆ. ವಾಹನಗಳ ರ್ಯಾಲಿ ಮಾಡುವ ಸಂದರ್ಭ ಕಟ್ಟಿರುವ ಧ್ವಜ ಕೆಳಕ್ಕೆ ಬೀಳದಂತೆ, ಕೆಳಮುಖವಾಗಿ ಹಾರದಂತೆ, ಅವಮಾನವಾಗುವ ಯಾವುದೇ ರೀತಿಯಲ್ಲೂ ಧ್ವಜ ಹಾರದಂತೆ ನೋಡಿಕೊಳ್ಳಬೇಕು. ಗಾಳಿಯ ರಭಸಕ್ಕೆ ಧ್ವಜ ತುಂಡಾಗುವುದು ಅಥವಾ ಹರಿದು ಹೋಗುವ ಸಾಧ್ಯತೆ ಇದ್ದಲ್ಲಿ, ಆ ಬಗ್ಗೆಯೂ ಎಚ್ಚರ ವಹಿಸಬೇಕು. ಧ್ವಜ ಸಂಹಿತೆಯನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಸ್ವಾತಂತ್ರ್ಯದ ಸಂಭ್ರಮಾಚರಣೆ ಮಾಡಬೇಕು. ಸ್ವಾತಂತ್ರೋತ್ಸವದ ಕಾರ್ಯಕ್ರಮ ಮುಗಿದ ಅನಂತರ ಧ್ವಜವನ್ನು ಗೌರವಯುತವಾಗಿ ಒಂದೆಡೆ ಇಡಬೇಕು ಎಂದು ತಿಳಿಸಿದ್ದಾರೆ.