Friday, January 24, 2025
ಸುದ್ದಿ

ಆರ್ಟ್ ಆಫ್ ಲಿವಿಂಗ್, ಪುತ್ತೂರು ವತಿಯಿಂದ ರಕ್ಷಾ ಬಂಧನ ಆಚರಣೆ ಹಾಗೂ “ಘರ್ ಘರ್ ತಿರಂಗಾ” ಕಾರ್ಯಕ್ರಮ ಕ್ಕೆ ಚಾಲನೆ –ಕಹಳೆ ನ್ಯೂಸ್

ಪುತ್ತೂರು: ಆರ್ಟ್ ಆಫ್ ಲಿವಿಂಗ್, ಪುತ್ತೂರು ವತಿಯಿಂದ ಸತ್ಸಂಗ, ರಕ್ಷಾ ಬಂಧನ ಆಚರಣೆ ಹಾಗೂ “ಘರ್ ಘರ್ ತಿರಂಗಾ” ಕಾರ್ಯಕ್ರಮ ಕ್ಕೆ ಚಾಲನೆನೀಡುವ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನ್ಯ ಪ್ರಧಾನಮಂತ್ರಿಗಳು ಕರೆ ಕೊಟ್ಟಿರುವಂತೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಮೂರು ದಿನಗಳ ಕಾಲ ಆರೋಹಿಸಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿ ಎಲ್ಲರೂ ಸಂಭ್ರಮಿಸಬೇಕೆಂದು ಪರಮ ಪೂಜ್ಯ ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರು ಇತ್ತೀಚೆಗೆ ಸಮಾಜದ ಜನತೆಯನ್ನು ಹುರಿದುಂಬಿಸಿದ್ದಾರೆ. ಈ ಆಶಯವನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಪುತ್ತೂರು ಆರ್ಟ್ ಆಫ್ ಲಿವಿಂಗ್ ಘಟಕವು ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದೆ.
ರಾಷ್ಟ್ರ ಧ್ವಜಕ್ಕೆ ಪೂಜೆ ಗೈದು, ಆ ಬಳಿಕ ನಿವೃತ್ತ ಸೈನಿಕರಿಗೆ ಅವುಗಳನ್ನು ನೀಡಿ ಗೌರವಿಸುವ ಮೂಲಕ ವಿಶೇಷ ವಾಗಿ ಈ ಕಾರ್ಯಕ್ರಮ ವನ್ನು ನಡೆಸಲಾಯಿತು. ವಾಯುಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದ ಶ್ರೀ ಗಣೇಶ್ ಎ.ಎನ್, ನಿವೃತ್ತ ಸೈನಿಕರಾದ ಶ್ರೀ ಸುರೇಶ್ ಕೆ.ಯು, ಮತ್ತು ಇಂಡಿಯನ್ ಆರ್ಮಿ ಯಲ್ಲಿ 27 ವರ್ಷ ಸೇವೆ ಗೈದ ಕುಮಾರ್ ಕೆ.ಎ- ಇವರು ಗೌರವವನ್ನು ಸ್ವೀಕರಿಸಿದರು.
ಕಾರ್ಯಕ್ರಮ ವನ್ನು ಆರ್ಟ್ ಆಫ್ ಲಿವಿಂಗ್ , ಪುತ್ತೂರಿನ ಶಿಕ್ಷಕರಾದ ಶ್ರೀಮತಿ ಸತ್ಯವತಿ ಕೆ.ಎಸ್, ಶ್ರೀಮತಿ ಸುಧಾ ಹೆಬ್ಬಾರ್, ಶ್ರೀಮತಿ ಶರಾವತೀ ರವಿನಾರಾಯಣ, ಡಿಸ್ಟ್ರಿಕ್ಟ್ ಡೆವಲಪ್ಮೆಂಟ್ ಕಮಿಟಿ ಸದಸ್ಯರಾದ ಭಾರತೀ ಜಯರಾಂ , ಅತಿಥಿಗಳಾದ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆ ಗಳ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ನಟ್ಟೋಜ, ಆರ್ಟ್ ಆಫ್ ಲಿವಿಂಗ್ ಸುಳ್ಯ ದ ಶಿಕ್ಷಕರಾದ ಶ್ರೀ ಆರ್.ಕೆ.ಭಟ್, ಡಿ.ಡಿ.ಸಿ. ಸದಸ್ಯರಾದ ಶ್ರೀಮತಿ ಉಷಾ ಇವರು ನಡೆಸಿ ಕೊಟ್ಟರು. ಈ ಕಾರ್ಯಕ್ರಮಕ್ಕೆ ಕೆನರಾ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಹಯೋಗವನ್ನು ನೀಡಿದ್ದರು.
ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ನ ಸ್ವಯಂ ಸೇವಕರು, ಸದಸ್ಯರು, ಸಮಾಜದ ಬಾಂಧವರು ಭಾಗವಹಿಸಿದ್ದರು. ಸಂಸ್ಥೆ ಯ ಸದಸ್ಯರಿಂದ ಮಧುರವಾದ ನಾಮಸಂಕೀರ್ತನೆಯನ್ನು ನಡೆಸಿಕೊಡಲಾಯಿತು.