Tuesday, January 21, 2025
ಕ್ರೈಮ್ರಾಜಕೀಯರಾಷ್ಟ್ರೀಯಸುದ್ದಿ

ನೂಪುರ್ ಶರ್ಮಾ ಹತ್ಯೆ ಮಾಡಲು ಪಾಕ್ ಉಗ್ರ ಸಂಘಟನೆ ನಿಯೋಜಿಸಿದ್ದ ಉಗ್ರ ಮೊಹಮ್ಮದ್‌ ನದೀಮ್‌ ಬಂಧನ – ಕಹಳೆ ನ್ಯೂಸ್

ಲಕ್ನೋ: ಬಿಜೆಪಿಯ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಹತ್ಯೆ ಮಾಡಲು ನಿಯೋಜಿತನಾಗಿದ್ದ ಉಗ್ರನನ್ನು ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆತನನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್‌-ಎ-ಮೊಹಮ್ಮದ್‌ನ ಮೊಹಮ್ಮದ್‌ ನದೀಮ್‌ ಎಂದು ಗುರುತಿಸಲಾಗಿದೆ.

ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಗಂಗೋಹ್‌ ಎಂಬ ಗ್ರಾಮದಲ್ಲಿ ಆತ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಆತನನ್ನು ಸಮಗ್ರವಾಗಿ ವಿಚಾರಣೆ ನಡೆಸಿದ ವೇಳೆ, ತನಗೆ ನೂಪುರ್‌ ಶರ್ಮಾ ಅವರನ್ನು ಕೊಲ್ಲುವ ಕೆಲಸ ವಹಿಸಲಾಗಿತ್ತು. ನೆರೆಯ ರಾಷ್ಟ್ರದಲ್ಲಿ ಈ ಉದ್ದೇಶಕ್ಕಾಗಿ ತನಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ಉದ್ದೇಶಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಶೀಘ್ರವೇ ಪಾಕಿಸ್ತಾನಕ್ಕೆ ತೆರಳುವವನಿದ್ದ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಆತನ ಫೋನ್‌ ಸಂಭಾಷಣೆ ವೇಳೆ, ಸುಧಾರಿತ ಸ್ಫೋಟಕಗಳನ್ನು ತಯಾರಿಸುವ ವಿವರಗಳನ್ನು ಪಡೆದುಕೊಂಡದ್ದು ಖಚಿತವಾಗಿದೆ. ವಾಟ್ಸ್‌ಆಯಪ್‌, ಟೆಲೆಗ್ರಾಂ, ಫೇಸ್‌ಬುಕ್‌ ಮೆಸೇಂಜರ್‌, ಕ್ಲಬ್‌ಹೌಸ್‌ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಸಂಘಟನೆ ಜತೆಗೆ ಸಂಪರ್ಕ ಇರಿಸಿಕೊಂಡಿದ್ದ.