ದರೋಡೆ, ರಕ್ತಚಂದನ ಕಳ್ಳತನ, ಪುತ್ತೂರು ರಾಜಧಾನಿ ಜುವೆಲ್ಲರ್ಸ್ ಶೂಟೌಟ್ ಪ್ರಕರಣದ ಆರೋಪಿ – ಅಕ್ರಮ ಗೋಸಾಗಾಟ – ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣಗಳ ಆರೋಪಿ ಅನ್ವರ್ ಮುಗುಳಿ ಸ್ಮರಣಾರ್ಥ ಮಿತ್ತನಡ್ಕ ಸರಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮ..! ಜಿಹಾದಿ ಮುಗಳಿ ಅನ್ವರ್ ಕ್ರಿಮಿನಲ್ ಬ್ಯಾಗ್ರೌಂಡ್ ಇಲ್ಲಿದೆ ನೋಡಿ..! – ಕಹಳೆ ನ್ಯೂಸ್
ಪ್ರತಿಯೊಬ್ಬ ದೇಶಭಕ್ತನು ಓದಲೇ ಬೇಕಾದ ಸ್ಟೋರಿ ಇದು. ಎಸ್ ಹೌದು, ಅನ್ವರ್ ಮುಗುಳಿ ಎಂಬಾತನ ಸ್ಮರಣಾರ್ಥ ಸರಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈತನೊಬ್ಬ ನಿಜಕ್ಕೂ ದೇಶಭಕ್ತ, ಸಮಾಜ ಸೇವಕ, ಉತ್ತಮ ವ್ಯಕ್ತಿ ಎಂದಾದರೆ ಇವನು ಎಲ್ಲರಿಗೂ ಮಾದರಿ. ಆದ್ರೆ ಈತನೊಬ್ಬ ಅಂತಿಂಥ ಖದೀಮನಲ್ಲ ಇವನ ಬ್ಯಾಗ್ರೌಂಡ್ ಕೇಳಿದ್ರೆ ಬೆಚ್ಚಿಬೀಳ್ತಿರಿ..!
ಈತನ ಹೆಸರು ಅನ್ವರ್ ಮುಗುಳಿ..! ಈತನ ಬ್ಯಾಗ್ರೌಂಡ್ ಸ್ಟೋರಿಯನ್ನೇ ತಿಳಿದುಕೊಂಡು ಬರೋಣ ಬನ್ನಿ ಓದೋಣ, ಕ್ರಿಮಿನಲ್ ಚಟುವಟಿಕೆ, ದರೋಡೆ, ರಕ್ತಚಂದನ ಕಳ್ಳತನ ಪ್ರಕರಣದ ಆರೋಪಿ ಮತ್ತು ಕೇರಳ ಗಡಿಭಾಗದಲ್ಲಿ ಪೊಲೀಸ್ ವಾಹನ ಅಡ್ಡಗಟ್ಟಿ ಪೊಲೀಸರ ಮೇಲೆ ಕೆಸರು ಎರಚಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದವರಲ್ಲಿ ಈತನೂ ಒಬ್ಬ. ಈತ ಕೆಲ ವರ್ಷಗಳ ಹಿಂದೆ ಲಾರಿಯಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಈತ 2015ರ ಅಕ್ಟೋಬರ್ ತಿಂಗಳ 6ರಂದು ಪುತ್ತೂರು ಮುಖ್ಯರಸ್ತೆಯ ರಾಜಧಾನಿ ಜ್ಯುವೆಲ್ಲರ್ಸ್ ಮೇಲೆ ಅನ್ವರ್ ಹಾಗೂ ಆತನ 5 ಮಂದಿ ಸಹಚರರು ಶೂಟೌಟ್ ನಡೆಸಿದ್ದರು. ಅಂತೆಯೇ ಬೆಂಗಳೂರಿನಲ್ಲಿ ರಕ್ತಚಂದನ ಕಳ್ಳತನ ಮಾಡಿ ಬೆಂಗಳೂರು ಪೊಲೀಸರು ಈತನನ್ನು ಬಂಧಿಸಿದ್ದರು.
ಅಷ್ಟು ಮಾತ್ರವಲ್ಲದೆ, 2018ರಲ್ಲಿ ಬಿಜೆಪಿ ಮುಖಂಡರೊಬ್ಬರ ಮೇಲೆ ಈತನ ಗ್ಯಾಂಗ್ ಹಲ್ಲೆ ನಡೆಸಿತ್ತು. ಈ ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಧಾವಿಸಿದ ವಿಟ್ಲ ಪೊಲೀಸರಿಗೆ ಅನ್ವರ್ ಮುಗುಳಿಯ ಸಹಚರರು ದಿಗ್ಭಂಧನ ವಿಧಿಸಿ,
ಪೊಲೀಸ್ ವಾಹನಕ್ಕೆ ಕೆಸರು ಚೆಲ್ಲಿ ಪೊಲೀಸರ ಮೇಲೆಯೇ ಈತನ ಗ್ಯಾಂಗ್ ಹಲ್ಲೆಗೆ ಯತ್ನಿಸಿತ್ತು. ಈತ ಕೇರಳ ಗಡಿಭಾಗದಲ್ಲಿ ಸಂಚರಿಸುವ ಲಾರಿ, ಇತರ ವಾಹನವನ್ನು ತಡೆದು ಹಫ್ತಾ ವಸೂಲಿ ಮಾಡುತ್ತಿದ್ದ. ಈತನ ಗ್ಯಾಂಗ್ ಕೂಡ ಇದಕ್ಕೆ ಸಾಥ್ ಕೊಡುತ್ತಿತ್ತು. ಮುಂದೆ ಲಾರಿ ಅಪಘಾತದಲ್ಲಿಯೇ ಈತ ಸಾವನ್ನಪ್ಪಿದ್ದ.
ಅನ್ವರ್ ಮುಗುಳಿಯ ಸಹಚರ ಶಫೀಕ್ ಹೊರದೇಶದಿಂದ ವಾಟ್ಸಾಪ್ ಮತ್ತು ಸ್ಯಾಟಲೈಟ್ ಕರೆ – ಧಮ್ಕಿ
ಇಂತಹ ಖತರ್ನಾಕ್ ಖದೀಮ ನಡುರಸ್ತೆಯಲ್ಲೇ ಸಾವೀಗೀಡಾಗಿದ್ದ. ಅಂತಹ ವ್ಯಕ್ತಿಯ ನೆನಪಿಗಾಗಿ ಸರಕಾರಿ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಕಾರ್ಯಕ್ರಮ ಶಾಲೆಯಲ್ಲಿ ನಡೆಯಲು ಅವಕಾಶ ನೀಡಬಾರದು ಎನ್ನುವ ಮಾತು ಸಾರ್ವಜಿನಿಕ ವಲಯದಿಂದ ಕೇಳಿ ಬಂದಿದ್ದು ಈ ಬಗ್ಗೆ ಕಹಳೆ ನ್ಯೂಸ್ ಕೇಬಲ್ ಟಿವಿ ಚಾನೆಲ್ ಹಾಗೂ ವಿಟ್ಲದ ವಿಟೀವಿ ವೆಬ್‌ಸೈಟ್ ನಲ್ಲಿ ವರದಿ ಭಿತ್ತರಿಸಿತ್ತು. ಈ ವರದಿ ಪ್ರಸಾರವಾಗುತ್ತಿದ್ದಂತೆ ಅನ್ವರ್ ಮುಗುಳಿಯ ಸಹಚರ ಶಫೀಕ್ ಹೊರದೇಶದಿಂದ ವಾಟ್ಸಾಪ್ ಮತ್ತು ಸ್ಯಾಟಲೈಟ್ ಕರೆ ಮಾಡಿ ಸುದ್ಧಿ ಸಂಸ್ಥೆಗಳಿಗೆ ಧಮ್ಕಿ ಹಾಕಿದ್ದಾನೆ. ಮತ್ತು ನಾನು ಅನ್ವರ್ ನ ಕುಚಿಕು ಫ್ರೆಂಡ್. ಅವ ಸತ್ತಿರಬಹುದು. ನಾವಿನ್ನು ಜೀವಂತವಾಗಿದ್ದೇವೆ. ನಿಮಗೆ ಮಿತ್ತನಡ್ಕದ ಅನ್ವರ್ ನ ಮಾಹಿತಿ ಕೊಟ್ಟವನಿಗೆ ಮೂಹೂರ್ತ ಫಿಕ್ಸ್ ಮಾಡಿದ್ದೇವೆ ಎಂದು ಶಾಫೀಕ್ ಧಮ್ಕಿ ಹಾಕಿದ್ದಾನೆ.
ಈ ಖರ್ತನಾಕ್ ಶಫೀಕ್‌ನ ಹಿನ್ನೆಯೂ ಕೆಟ್ಟದ್ದಾಗಿದೆ. ಕೊಳ್ನಾಡು ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ಬೇಡಗುಡ್ಡೆ ಸುಂಕದಕಟ್ಟೆ ಬೈಕ್‌ನಲ್ಲಿ ತೆರಳುತ್ತಿದ್ದ ಹರೀಶ್ ಅವರನ್ನು ಅನ್ವರ್ ಮುಗುಳಿ, ಶಫೀಕ್ ಸೇರಿದಂತೆ 30 ಕ್ಕಿಂತಲೂ ಅಧಿಕ ಮಂದಿ ದೊಣ್ಣೆಯಿಂದ ಹಲ್ಲೆ ನಡೆಸಿ, ತಲವಾರ್‌ನಿಂದ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುವಾಗ ಪೊಲೀಸ್ ವಾಹನ ಅಡ್ಡಗಟ್ಟಿ ಕೆಸರು ಎರಚಿದ ಪ್ರಕರಣದ ಪ್ರಮುಖ ಆರೋಪಿಗಳಲ್ಲಿಯೂ ಒಬ್ಬ. ಈ ಘಟನೆಯ ನಂತರ ಶಫೀಕ್ ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡು ವಿದೇಶಕ್ಕೆ ಹಾರಿದ್ದಾನೆ. ಇದೀಗ ಈತನ ವಿರುದ್ಧ ವಾರಂಟ್ ಕೂಡ ಜಾರಿಯಾಗಿದೆ.
ಆಡಿಯೋ ವೈರಲ್ ಕುರಿತಂತೆ ಮಿತ್ತನಡ್ಕ ಶಾಲಾ ಮುಖ್ಯೋಪಾಧ್ಯಾಯರ ಪ್ರತಿಕ್ರಿಯೆ :
ಆಡಿಯೋ ವೈರಲ್ ಕುರಿತಂತೆ ಪ್ರತಿಕ್ರಿಯಿಸಿದ ಮಿತ್ತನಡ್ಕ ಶಾಲಾ ಮುಖ್ಯೋಪಾಧ್ಯಾಯರು ” ಒಂದು ಸ್ಥಳೀಯರು ಬಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನ ನಾವು ಮಕ್ಕಳಿಗೆ ಸಿಹಿತಿಂಡಿ ವಿತರಣೆ ಹಾಗೂ ಕೆಲ ಸಾಧಕರಿಗೆ ಸನ್ಮಾನ ಮಾಡುತ್ತೆವೆ, ಆಡಿಯೋದಲ್ಲಿ ಇರುವ ಕಾರ್ಯಕ್ರಮಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು ಈ ಬಗ್ಗೆ ವಿಟ್ಲ ಠಾಣಾ ಇನ್ಸ್‌ಪೆಕ್ಟರ್ ಹೆಚ್ ಇ ನಾಗರಾಜ್ ರವರು ಕೂಡಲೇ ಎಚ್ಚೆತ್ತುಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಒಟ್ಟಿನಲ್ಲಿ ಒಬ್ಬ ಖತರ್ನಾಕ್, ಕ್ರಿಮಿನಲ್ ಆಗಿರುವ ಅನ್ವರ್ ಮುಗುಳಿಯ ನೆನಪಿಗಾಗಿ ಕಾರ್ಯಕ್ರಮ ಆಯೋಜನೆ ಮಾಡಿದ ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಮತ್ತೆ ಆತಂಕದ ಛಾಯೆ ಮೂಡಿದೆ. ಪ್ರವೀಣ್ ನೆಟ್ಟಾರು, ಫಾಝಿಲ್ ಹತ್ಯೆ ಬಳಿಕ ಆತಂಕದಲ್ಲಿದ್ದ ಕರಾವಳಿಯಲ್ಲಿ ತಕ್ಕ ಮಟ್ಟಿಗೆ ತಣ್ಣಗಾಗುತ್ತಿದ್ದಂತೆ ಮತ್ತೆ ಕೋಮು ಪ್ರಚೋದನಕಾರಿ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಪೋಸ್ಟ್‌ಗಳು ಮತ್ತು ಎಲ್ಲೋ ಕೂತುಕೊಂಡು ತಾನೊಬ್ಬ ಅಂಡರ್ ವರ್ಲ್ಡ್ ಡಾನ್ ಎಂಬಂತೆ ತನ್ನನ್ನು ಬಿಂಬಿಸಿಕೊಂಡು ಶಫೀಕ್ ಮಾಧ್ಯಮಕ್ಕೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ. ಇಂತಹ ಕೃತ್ಯಗಳು ಜನರನ್ನು ಇನ್ನಷ್ಟು ಆತಂಕಕ್ಕೆ ಈಡುಮಾಡುತ್ತಿದೆ. ಆದ್ರೆ ಕರಾವಳಿಯಲ್ಲಿ ನಡೆಯುವ ಬೆಳವಣಿಗೆಯ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ಕರಾವಳಿಯ ಪೊಲೀಸರು ನಿಗಾ ಇರುವಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಬಾಲ ಬಿಚ್ಚಿದರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದಿದ್ದಾರೆ.
ಸಮಾಜದ ಆಗುಹೋಗುಗಳ, ಸಮಸ್ಯೆ, ಕೆಟ್ಟ ಹುಳುಗಳ ಮುಖವಾಡವನ್ನು ಬಯಲಿಗೆಳೆಯುವ, ನೈಜ ನಿಖರ ನಿರ್ಭೀತ ಸುದ್ದಿ ನೀಡುವ ನಿಮಗೂ ಅಂಜದೆ, ಇಂತಹ ಕಳ್ಳ ಖದೀಮರ ಟೊಳ್ಳು ಬೆದರಿಕೆಗೆ ಬಗ್ಗದೆ ಸಮಾಜದ ಸ್ವಾಸ್ಥಕ್ಕಾಗಿ, ಒಳಿತಿಗಾಗಿ ಇನ್ನು ಮುಂದೆಯೂ ಕಾರ್ಯನಿರ್ವಹಿಸಲಿದೆ.