ಬಿಡುಗಡೆಗೂ ಮುನ್ನವೇ ರಾಜ್ಯಮಟ್ಟದ ಶಾರ್ಟ್ ಫಿಲ್ಮ್ ಸ್ಪರ್ಧೆಯಲ್ಲಿ ಅವಾರ್ಡ್ ಗೆದ್ದ ‘ಬಾಯಿಲ್ಡ್ ರೈಸ್’ ತುಳು ಕಿರುಚಿತ್ರ- ಕಹಳೆ ನ್ಯೂಸ್
ಉಜಿರೆ: ಎಸ್.ಡಿ.ಎಂ ಕಾಲೇಜಿನ B.VOX APEX-2022 ರಾಜ್ಯಮಟ್ಟದ ಶಾರ್ಟ್ ಫಿಲ್ಮ್ ಸ್ಪರ್ಧೆಯಲ್ಲಿ ‘ಬಾಯಿಲ್ಡ್ ರೈಸ್’ ತುಳು ಕಿರುಚಿತ್ರ ಪ್ರಥಮ ಸ್ಥಾನ ಪಡೆದಿದೆ.
‘ಬೆಸ್ಟ್ ಮೂವಿ’ ಹಾಗೂ ‘ಬೆಸ್ಟ್ ಸ್ಟೋರಿ’ ವಿಭಾಗದಲ್ಲಿ ಕರಾವಳಿಯ ನಿರ್ದೇಶಕ ಜಯಂತ್ ನಿಟ್ಟಡೆಯವರ ಚೊಚ್ಚಲ ಕಿರುಚಿತ್ರ ‘ಬಾಯಿಲ್ಡ್ ರೈಸ್’ ಪ್ರಥಮ ಸ್ಥಾನ ಪಡೆದು 10,000 ರೂ ನಗದು ಹಾಗೂ 2 ಅವಾರ್ಡ್ ನ್ನು ತನ್ನದಾಗಿಸಿಕೊಂಡಿದೆ. ದಿವ್ಯ ಎಲ್ ಮೂಡಿಗೆರೆ ನಿರ್ಮಾಣ, ಜನಾರ್ಧನ್ ಮೌರ್ಯರವರ ಛಾಯಗ್ರಹಣದಲ್ಲಿ ಈ ಕಿರುಚಿತ್ರ ಮೂಡಿ ಬಂದಿದೆ.
ಆ.13ರಂದು ಸಂಜೆ 6 ಗಂಟೆಗೆ ಮಾಯಿಲು ಫಿಲಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ‘ಬಾಯಿಲ್ಡ್ ರೈಸ್’ ತುಳು ಕಿರುಚಿತ್ರದ ಲಿರಿಕಲ್ ಸಾಂಗ್ ಬಿಡುಡೆಯಾಗಿದ್ದು, ಕರ್ನಾಟಕದಾದ್ಯಂತ ಭಾರೀ ಮೆಚ್ಚಿಗೆ ಪಡೆದಿದೆ. ಕಿರುಚಿತ್ರಕ್ಕೆ ನಿರ್ದೇಶಕ ಜಯಂತ್ ನಿಟ್ಟಡೆ ಹಾಗೂ ಅಭ್ಯುದಯ ಸಾಹಿತ್ಯ ಬರೆದಿದ್ದು ಆ್ಯಂಟೊನಿಯವರು ಸಂಗೀತ, ಆರ್ ಪ್ರದೀಪ್ ಗರ್ಡಾಡಿಯವರ ಸಂಕಲನವಿದೆ.