Friday, November 22, 2024
ಸುದ್ದಿ

ಪುತ್ತೂರು: ಕರಾಟೆ ಪಂದ್ಯಾಟದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸನ್ಮಯ ಮತ್ತು ಪ್ರತೀಕ್ಷಾ ರಾಜ್ಯ ಮಟ್ಟಕ್ಕೆ ಆಯ್ಕೆ – ಕಹಳೆನ್ಯೂಸ್

ಪುತ್ತೂರು : ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮಂಗಳೂರಿನ ಸಂತ ಆಗ್ನೆಸ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರತೀಕ್ಷಾ (ನೆಹರೂನಗರದ ಆನಂದ ಗೌಡ ಮತ್ತು ಸಾವಿತ್ರಿ ದಂಪತಿ ಪುತ್ರಿ) ಮತ್ತು ಸನ್ಮಯ (ಕನ್ಯಾನದ ಈಶ್ವರ ಪ್ರಸಾದ್ ಮತ್ತು ಮಧುರಾ ದಂಪತಿ ಪುತ್ರಿ) ಚಿನ್ನದ ಪದಕವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕಿಯರ ವಿಭಾಗದಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪ್ರಾಪ್ತಿ ಕೆ.ಎಸ್ (ಬಲ್ನಾಡು ಗ್ರಾಮದ ಸೀತರಾಮ ಗೌಡ ಮತ್ತು ದೇವಿಕಾ ದಂಪತಿ ಪುತ್ರಿ) ಮತ್ತು ಪ್ರಥಮ ಪಿಯುಸಿ ಕಲಾ ವಿಭಾಗದ ಗಾನಶ್ರೀ (ನೆಹರೂನಗರದ ದೇವಪ್ಪ ಮತ್ತು ಮೀನಾಕ್ಷಿ ದಂಪತಿ ಪುತ್ರಿ) ಕಂಚಿನ ಪದಕವನ್ನು ಗಳಿಸಿದ್ದಾರೆ.

ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ರಿತೇಶ್ (ಕುರಿಯ ಗ್ರಾಮದ ಶೀನಪ್ಪ ಗೌಡ ಮತ್ತು ದೇವಿಕಾ ದಂಪತಿ ಪುತ್ರ) ಮತ್ತು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪವನ್ (ಕಡೇಶ್ವಾಲ್ಯದ ಜಯಪ್ರಕಾಶ್ ಮತ್ತು ಗಂಗಾ ಸರಿತಾ ದಂಪತಿ ಪುತ್ರ) ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಂದನ್ ಗೌಡ(ಕುಣಿಗಲ್ ನ ಶಿವಣ್ಣ ಬಿ. ಎಂ ಮತ್ತು ಶೋಭಾ ದಂಪತಿ ಪುತ್ರ), ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿನೀಶ್ ಕುಮಾರ್ (ಹೆಗ್ಗದ ದೇವನ ಕೋಟೆಯ ಸುರೇಶ್ ಮತ್ತು ಮೀನಾಕ್ಷಿ ದಂಪತಿ ಪುತ್ರ) ಹಾಗೂ ಪ್ರಥಮ ಪಿಯುಸಿ ಕಲಾ ವಿಭಾಗದ ಅರುಣ್ ಕುಮಾರ್(ಪುತ್ತೂರಿನ ರಮೇಶ ಎ ಎಂ ಮತ್ತು ಲಲಿತಾ ದಂಪತಿ ಪುತ್ರ) ಕಂಚಿನ ಪದಕವನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.