Recent Posts

Sunday, January 19, 2025
ಸುದ್ದಿ

ಉಜಿರೆ ಬೆನಕ ಆಸ್ಪತ್ರೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವ: ಸಾರ್ವಜನಿಕರಿಗೆ ಉಚಿತ ರಕ್ತದೊತ್ತಡ-ಮಧುಮೇಹ ತಪಾಸಣೆ ಹಾಗೂ ಸಮಾಲೋಚನಾ ಶಿಬಿರ –ಕಹಳೆ ನ್ಯೂಸ್

ಉಜಿರೆ : ನಮ್ಮ ಹಿರಿಯರ ಬಲಿದಾನದ ಫಲವಾಗಿ ನಮಗೆ ದೊರೆತ ಸ್ವಾತಂತ್ರ‍್ಯದ ಸಂರಕ್ಷಣೆಯಲ್ಲಿ ಭಾರತೀಯ ಸೇನೆಯ ಸೇವೆ ಅನುಪಮವಾದುದು. ಅಂತೆಯೇ ದೇಶದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಲ್ಲಿ ಆರೋಗ್ಯ ಸಂವರ್ಧನೆ ಕೂಡಾ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಭಾರತ ಸ್ವಾತಂತ್ರ‍್ಯದ 75 ವರ್ಷಗಳನ್ನು ಪೂರೈಸಿದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಬೆನಕ ಆಸ್ಪತ್ರೆಯು ನಿವೃತ್ತ ಸೈನಿಕರನ್ನು ಗುರುತಿಸುವ ಹಾಗೂ ಆರೋಗ್ಯ ಜಾಗೃತಿಗಾಗಿ ಸಾರ್ವಜನಿಕರಿಗೆ ಉಚಿತವಾಗಿ ರಕ್ತದೊತ್ತಡ-ಮಧುಮೇಹ ತಪಾಸಣೆ ಹಾಗೂ ಸಮಾಲೋಚನಾ ಶಿಬಿರವನ್ನು ಬೆನಕ ಆಸ್ಪತ್ರೆ ಆಯೋಜಿಸಿದೆ ಎಂದು ಉಜಿರೆಯ ಬೆನಕ ಆಸ್ಪತ್ರೆಯ ನಿರ್ದೇಶಕ ಡಾ.ಗೋಪಾಲಕೃಷ್ಣ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಜಿರೆ ಬೆನಕ ಆಸ್ಪತ್ರೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಡಾ.ಗೋಪಾಲಕೃಷ್ಣ, ಡಾ.ಭಾರತಿ ಹಾಗೂ ಸಿಬ್ಬಂಧಿ ವರ್ಗ ನಿವೃತ್ತ ಸೇನಾನಿಗಳಿಗೆ ಗೌರವಾರ್ಪಣೆ ಮಾಡಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಳ್ತಂಗಡಿ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ರೊ.ಸುನಿಲ್ ಶೆಣೈ ಅವರು ಮಾತನಾಡುತ್ತಾ ನಾವು ಮಾಡುವ ಉದ್ಯೋಗದಲ್ಲಿ ಬದ್ದತೆ ಹಾಗೂ ಸಮುದಾಯದ ಅಗತ್ಯಗಳಗೆ ಧನಾತ್ಮಕವಾಗಿ ಸ್ಪಂದಿಸುವ ಮೂಲಕ ದೇಶಸೇವೆಯನ್ನು ಮಾಡಬಹುದು. ದೇಶ ಭಕ್ತರು ಸ್ವಾತಂತ್ರ‍್ಯಕ್ಕಾಗಿ ಹೇಗೆ ಒಗ್ಗೂಡಿದರೋ ಹಾಗೆಯೇ ದೇಶದ ಅಭಿವೃದ್ದಿಗೆ ನಾವೆಲ್ಲರೂ ಒಗ್ಗೂಡಬೇಕಾಗಿದೆ. ಈ ನಿಟ್ಟಿನಲ್ಲಿ ಸಣ್ಣಪುಟ್ಟ ಪ್ರಯತ್ನಗಳು ಬಹುದೊಡ್ಡ ಪ್ರತಿಫಲ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.ರೋಟರೀ ಜಿಲ್ಲಾ ಸಹಾಯಕ ಗವರ್ನರ್ ಜನರಲ್ (ನಿ) ಎಂ.ವಿ.ಭಟ್ ಶುಭ ಹಾರೈಸಿದರು. ಬೆಳ್ತಂಗಡಿ ತಾಲೂಕು ನಿವೃತ ಸೈನಿಕ ಸಂಘದ ಕಾರ್ಯದರ್ಶಿ ಶ್ರೀಉಮೇಶ್ ಬಂಗೇರ ಸೇರಿದಂತೆ ಸನ್ಮಾನಿತಗೊಂಡ 23 ನಿವೃತ ಸೈನಿಕರಿಗೂ ಬೆನಕ ಆಸ್ಪತೆಯ ಸಿಬ್ಬಂದಿಗಳೆಲ್ಲರೂ ಸೇರಿ ಗೌರವ ಸೂಚಕವಾಗಿ ಸೆಲ್ಯೂಟ್ ಮಾಡಿ ಅಭಿವಂದಿಸಿದರು.
ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವಸ್ಯವಂದಿಸಿದರು.